ಪುಷ್ಪ ನಮನ ಸಲ್ಲಿಸುವ ಮೂಲಕ ಮಹಾತ್ಮರ ಜಯಂತಿಗಳ ಆಚರಣೆ

ದಾವಣಗೆರೆ

        ಮೇ.09 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಗಳ ಕಚೇರಿಯ ಸಭಾಂಗಣದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ , ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಶ್ರೀ ಭಗೀರಥರ ಜಯಂತಿಯನ್ನು ಶ್ರೀ ಶಂಕರಾಚಾರ್ಯ, ಹೇಮರೆಡ್ಡಿ ಮಲ್ಲಮ್ಮ ಹಾಗೂ ಶ್ರೀ ಭಗೀರಥರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

       ಈ ವೇಳೆ ಶಂಕರ ಸೇವಾ ಸಂಘದ ಅಚ್ಯುತ್, ಪಟ್ಟಾಭಿ ರಾಮಣ್ಣ, ನಾಗರಾಜ್ ಜೋಯಿಷರು, ಸುಮ, ವೆಂಕಟೇಶ್, ಪ್ರಭಾ ರಾಮದಾಸಪ್ಪ, ಸುಬ್ರಮಣ್ಯ, ಶ್ರೀಪಾದ ಜೋಯಿಷರು ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಡಾ.ಕೊಟ್ರೇಶ್, ಉಪಾಧ್ಯಕ್ಷ ಶಂಕರ್‍ಪಾಟೀಲ್, ಶಿವಲಿಂಗಮೂರ್ತಿ, ಸಣ್ಣಪ್ಪನವರ್, ಭೀಮರೆಡ್ಡಿ, ತಿಪ್ಪೇಶ್ ಹಾಗೂ ಜಿಲ್ಲಾ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ತಿಪ್ಪಣ್ಣ, ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಬಾತಿ, ಖಜಾಂಚಿ ಭರತ್, ಲೋಕೇಶ್, ಮಾಜಿ ಉಪಮೇಯರ್ ಮಂಜಮ್ಮ, ನಿಟ್ಟುವಳ್ಳಿ ಈಶಣ್ಣ, ಹೊಸಹಳ್ಳಿ ಗಿರೀಶ್, ಅಣ್ಣೇಶ್ ಹಾಗೂ ಇತರೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

        ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷೀಕಾಂತ್ ಭೀ ನಾಲ್ವಾರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರೇವಣ್ಣ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link