ಹೊಸದುರ್ಗ:
ಗಂಧವನ್ನು ತೇಯ್ದಂತೆ ಪರಿಮಳ ಸೂಸುವಂತೆ ಪುಸ್ತಕ ಓದಿದಷ್ಟು ಜ್ಞಾನದ ಬೆಳಕು ಚೆಲ್ಲುತ್ತದೆ, ಮಸ್ತಕ ಸರಿಯಾಗಿರಲು ಪುಸ್ತಕದ ಅವಶ್ಯಕತೆ ಇದೆ ಎಂದು ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.ಪಟ್ಟಣದ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಕುರಿತು ಆಶ್ರ್ರೀವಚನ ನೀಡಿದರು.
ಆಧುನಿಕ ಅನಿವಾರ್ಯತೆ ಒಳಗಾಗಿ ಗ್ರಂಥಲಯಗಳಿಗೆ ಹೋಗುವವರ ಸಂಖ್ಯೆ ಕಡಿಮೆಗುತ್ತಿದೆ. ಮಾನವನ ಮನಸ್ಸಿನ ಹೊಲದಲ್ಲಿ ಮೌಲ್ಯಗಳ ಬೀಜಗಳನ್ನು ಬಿತ್ತುವುದೇ ಪುಸ್ತಕಗಳು. ಅಬ್ದುಲ್ ಕಲಾಂರವರು ಹೇಳುವಂತೆ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ಎಂಬ ಅರಿವು ನಮಗೆ ಇರಬೇಕು. ಓದಿನಲ್ಲಿ ಸಿಗುವಷ್ಟು ಆನಂದ ಯಾವ ತಂತ್ರಾಂಶಗಳಿಂದ ಸಿಗುವುದಿಲ್ಲ. ಪುಸ್ತಕ ನಮ್ಮ ಬದುಕಿಗೆ ಬೆಳಕು ನೀಡುವ ದೊಡ್ಡ ದೀಪ ವಿಧ್ಯಾರ್ಥಿಗಳ ಜೇಬು ಪುಸ್ತಕಗಳ ಗ್ರಂಥಲಯ ಆಗಬೇಕೆ ಹೊರೆತು ದುರಬ್ಯಾಸಗಳ ದುವ್ರ್ಯಸನದ ದುರ್ನಾತ ವಾಗಬಾರದು. ಓದಿನಿಂದ ಮಾನವನ ಜೀವನ ಉನ್ನತ ಮಟ್ಟದಲ್ಲಿ ಬೆಳೆಯಲು ಬೆಳಕಗಾಗಲು ಸಾಧ್ಯ. ಗ್ರಂಥಲಯ ಹಾಲಿನೊಳಗೆ ಕಾಣದಮತೆ ಇರುವ ತುಪ್ಪದಂತೆ ಪುಸ್ತಕ ಅದರ ರುಚಿ ಬಲ್ಲವರಿಗೆ ಗೊತ್ತು ಎಂದರು.
ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನ ಕಾಣಬಲ್ಲ ಆದರೆ ಪುಸ್ತಕ ಓದದವನು ಒಂದು ಹುಟ್ಟಿನಲ್ಲಿ ಕೇವಲ ಒಂದು ಜೀವನ ಅನುಭವಿಸಬಲ್ಲ. ಗ್ರಂಥಲಯ ಸಾಮಾನ್ಯರ ವಿಶ್ವವಿದ್ಯಾಲಯ ಗ್ರಂಥಲಯಗಳು ಜ್ಞಾನದ ಸಾಗರ ಮೃಗವನ್ನು ಬಾಗಿಸಿ ಮಾನವನ್ನಾಗಿ ಮಾಡುವ ಶಕ್ತಿ ಪುಸ್ತಕಗಳಿಗೆ ಇದೆ. ಪುಸ್ತಕಗಳು ವಿಚಾರ ಮಾಡುವುದನ್ನು, ಆಲೋಚಿಸುವುದನ್ನು, ಗುರಿಯತ್ತ ಗುರಿ ಇಡುವುದನ್ನು ಕಲಿಸುವ ಶ್ರೇಷ್ಠ ಗುರು ಪುಸ್ತಕಗಳ ತವರೂರು.
ಗ್ರಂಥಲಯ ಪುಸ್ತಕ ನೆಮ್ಮದಿಯನ್ನು ಕಟ್ಟಿಕೊಡುವ ತಾಣವು. ಇಂದಿನ ಗುಣಾತ್ಮಾಕ ಶಿಕ್ಷಣಕ್ಕೆ ಪುಸ್ತಕ ಅಗತ್ಯ ಗ್ರಂಥಲಯ ದೇವಸ್ಥಾನವಾದರೆ ಅಲ್ಲಿರುವ ಶ್ರೇಷ್ಠ ಪುಸ್ತಕವೆ ದೇವರು. ಈ ದೇವರು ಕೇಳುವ ಕಾಣಿಕೆ ಬೇಡಿಕೆ ನಿಮ್ಮ ಓದುವ ಅಭಿಷೇಕ ಆರಾಧನೆ ಅರ್ಪಣೆಯನ್ನು ಪುಸ್ತಕಗಳ ನಮ್ಮ ಬದುಕಿನ ಮನೆಯ ಕಿಟಕಿಯಂತೆ ಪುಸ್ತಕಗಳು ಮಾಡುತ್ತವೆ. ನಮ್ಮ ಅಂತರಂಗದ ಅರಿವನ್ನು ಅರಳಿಸುವ ಅಣತಿ ಪುಸ್ತಕ ಸಂಸ್ಕತಿಯನ್ನು ಬೆಳಸಿ ಉಳಿಸುವ ಕಾಯಕ ನಿರಂತರವಾಗಿ ಮಾಡಬೇಕಾಗಿದೆ ಎಂದರು.