ಜೆ ಡಿ ಎಸ್ ನಿಂದ ಎಸ್ ಪುಟ್ಟಣ್ಣ ಉಚ್ಚಾಟನೆ..!

ಬೆಂಗಳೂರು

     ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಸಿಡಿದೆದ್ದಿರುವ ಹಾಗೂ ಜೆಡಿಎಸ್ ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡಸಿದ ಆಪಾದನೆ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯ ಎಸ್.ಪುಟ್ಟಣ್ಣ ಅವರನ್ನು ಜೆಡಿಎಸ್ ನಿಂದ ಉಚ್ಚಾಟಿಸ ಲಾಗಿದೆ.ಮೇಲ್ಮನೆ ಉಪ ಸಭಾಪತಿ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದ ಪುಟ್ಟಣ್ಣ, ಕಳೆದ ಎರಡು ದಶಕಗಳಿಂದ ಜೆಡಿಎಸ್ ನಲ್ಲಿದ್ದರು. ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಆಪ್ತರಾಗಿದ ಪುಟ್ಟಣ್ಣ, ೨೦೦೬ರಲ್ಲಿ ಜೆಡಿಎಸ್ – ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಸಂದರ್ಭದಲ್ಲಿ ಸೇನಾನಿಯಾಗ ಕಾರ್ಯ ನಿರ್ವಹಿಸಿದ್ದರು.

     ಪಕ್ಷದಲ್ಲಿ ನಮ್ಮನ್ನು ಗೌಡರ ಕುಟುಂಬ ನಿರ್ಲಕ್ಷ್ಯ  ಮಾಡಿದ ಹಿನ್ನೆಲೆಯಲ್ಲಿ ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ಪುಟ್ಟಣ್ಣ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

      ೨೦೧೮ ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಜೆಡಿಎಸ್ ನಿಂದ ಬಂಡಾಯವೆದ್ದಿದ್ದ ಶಾಸಕ ಜಮೀರ್ ಅಹ್ಮದ್ ಅವರ ತಂಡದಲ್ಲಿ ಪುಟ್ಟಣ್ಣಸಹ ಗುರುತಿಸಿಕೊಂಡಿದ್ದರು. ಶಾಸಕ ಗೋಪಾಲಯ್ಯ ಹೊರತುಪಡಿಸಿ ಉಳಿದೆಲ್ಲ ಬಂಡಾಯಶಾಸಕರು ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿದ್ದರು. ಆದರೆ ಪುಟ್ಟಣ್ಣ ಬಿಜೆಪಿ ಜತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಕೆಲವು ತಿಂಗಳುಗಳ ಹಿಂದೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಭೇಟಿ ಅವರನ್ನು ಮಾಡಿದ್ದರು. ಕುತೂಹಲಕ್ಕೆ ಕಾರಣವಾಗಿದ್ದ ಈ ಭೇಟಿ ಹಿನ್ನೆಲೆಯಲ್ಲಿ ಪುಟ್ಟಣ್ಣ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ, ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು.

      ಕಳೆದ ತಿಂಗಳು ರಾಮನಗರದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ್ದ ಪುಟ್ಟಣ್ಣ, ತಾವು ಸೇರಿದಂತೆ ಇನ್ನೂ ಕೆಲವು ವಿಧಾನ ವಿಧಾನ ಪರಿಷತ್ ಸದಸ್ಯರು ಜೆಡಿಎಸ್ ತೊರೆಯಲಿದ್ದೇವೆ ಎಂದಿದ್ದರು. ಇತ್ತೀಚೆಗೆ ಮೇಲ್ಮನೆ ಜೆಡಿಎಸ್ ಹಿರಿಯರ ಸದಸ್ಯರ ಗುಂಪು ಪ್ರತ್ಯೇಕವಾಗಿ ಸಭೆ ನಡೆಸಿ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ನಾಯಕತ್ವ ಬದಲಾವಣೆಗೆ ರಣಕಹಳೆ ಊದಿದ್ದರು.

     ಅಲ್ಲದೇ ಕುಮಾರಸ್ವಾಮಿ ನಡೆಯ ವಿರುದ್ಧ ಕಿಡಿಕಾರಿದ್ದ ಬಸವರಾಜ ಹೊರಟ್ಟಿ ಸೇರಿದಂತೆ ಇನ್ನೂ ಕೆಲವು ಸದಸ್ಯರು ಪದವೀಧರ ಮತ್ತು ಶಿಕ್ಷಣ ಕ್ಷೇತ್ರ ಸಂಬಂಧ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಕರೆದಿದ್ದ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.ಅಸಮಾಧಾನ ಹೊಂದಿರುವವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಮಾಡಲಾಗಿದ್ದು ಎಲ್ಲವೂ ಸರಿಯಾಗಲಿದೆ ಎಂದು ದೇವೇಗೌಡರು ಮಂಗಳವಾರವಷ್ಟೇ ಹೇಳಿಕೆ ನೀಡಿದ್ದರು.ಇದೀಗ ಪುಟ್ಟಣ್ಣ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕಾಗಿ ಉಚ್ಚಾಟಿಸಿರುವುದು ಬಂಡಾಯವನ್ನು ಹತ್ತಿಕ್ಕುವ ತಂತ್ರ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap