ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು : ಕುಮಾರಸ್ವಾಮಿ

ಬೆಂಗಳೂರು

      ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಒತ್ತು ನೀಡುವ ವಿದ್ಯಾರ್ಥಿಗಳಿಗೆ ಕೌಶಲ್ಯ ಹೆಚ್ಚಿಸುವ ಗುಣಮಟ್ಟದ ಶಿಕ್ಷಣವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು .ನಗರದಲ್ಲಿಂದು ಮಹಾರಾಣಿ ಕಾಲೇಜಿನಲ್ಲಿ ಏರ್ಪಡಿಸಿದ್ದ, ಭಾರತೀಯ ಶಿಕ್ಷಣ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ ಅವರು ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ಹೊಸ ಕೌಶಲಗಳನ್ನು ಬೆಳೆಸಬೇಕು. ನಮ್ಮ ಮಾನವ ಸಂಪ­ನ್ಮೂಲ ಸ್ಪರ್ಧಾತ್ಮಕವಾಗಿರುವಂತೆ ನಾವು ನೋಡಿಕೊಳ್ಳಬೇಕು ಎಂದರು.

       ಮನೆಯಲ್ಲಿಯೇ ಶಿಕ್ಷಣ ಪಡೆಯುವಂತೆ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ವಿಶ್ವವಿದ್ಯಾಲಯಗಳು ಗುಣಾತ್ಮಕ ಶಿಕ್ಷಣ ಒದಗಿಸುವ ವ್ಯವಸ್ಥೆಯೊಳಗೆ ಬರಬೇಕು. ಆಗ ಮಾತ್ರ ಅದರ ಘಟತೆ ಹೆಚ್ಚಲಿದೆ. ಸರ್ಕಾರವು ಶಿಕ್ಷಣಾಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಇದರ ಸದುಪಯೋಗ ವಿದ್ಯಾರ್ಥಿ ವರ್ಗ ಪಡೆಯ ಬೇಕು ಎಂದು ತಿಳಿಸಿದರು.

       ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ.ದೇಶದಲ್ಲಿ 18ರಿಂದ 30ರ ವರ್ಷ ವಯಸ್ಸಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭವಿಷ್ಯದ ದಿನಗಳು ಅವರದಾಗಿವೆ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣದ ಹೊಣೆಯೂ ಅವರ ಮೇಲಿದೆ.

        ಗುಣಮಟ್ಟ ಕಾಪಾಡಿಕೊಳ್ಳಬೇಕು ಎನ್ನುವುದು ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. ಕೆಲ ದಶಕಗಳಿಂದಿಚೀಗೆ ವಿಶ್ವವಿದ್ಯಾಲಯ ಶಿಕ್ಷಣದಲ್ಲಿ ರಚನಾತ್ಮಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಗುಣಮಟ್ಟದ ವಿಶ್ವವಿದ್ಯಾಲಯಗಳ ಸ್ಥಾಪನೆಯ ಪರಿಕಲ್ಪನೆಯೂ ಕಂಡುಬರುತ್ತಿದೆ. ವಾಸ್ತವವಾಗಿ ಆಧುನಿಕ ಪರಿಕಲ್ಪನೆಯ ವಿ.ವಿಗಳನ್ನು ರೂಪಿಸುವಲ್ಲಿ ಗೊಂದಲದಲ್ಲಿದ್ದೇವೆ ಎಂದು ನುಡಿದರು.
ವಿಚಾರ ಸಂಕಿರಣದಲ್ಲಿ ಚಿಂತಕ ಡಾ.ಜಿ. ರಾಮಕೃಷ್ಣ, ರಾಯಚೂರು ವಿವಿಯ ವಿಶೇಷಾಧಿಕಾರಿ  .ಮುಜಾಫರ್ ಅಸಾದಿ, ಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಸಿ.ಕೆ. ಲೋಕಪ್ಪ ಗೌಡ, ಗೋಪಿನಾಥ್, ಬಿ.ಕೆ.ಚಂದ್ರಶೇಖರ ಸೇರಿದಂತೆ ಪ್ರಮುಖರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap