ಆರ್ ಶಂಕರ್ ಅನರ್ಹ : ಸ್ಫೀಕರ್

ಬೆಂಗಳೂರು :

    ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ ಜುಲೈ6ರಂದು ರಾಜೀನಾಮೆ ಸಲ್ಲಿಸಲು ಬರುವ ಬಗ್ಗೆ ಸಮಯ ಕೇಳಿಲ್ಲ. ನಾನು ಕಚೇರಿ ಬಿಟ್ಟು ತೆರಳಿದ ಮೇಲೆ ಬಂದಿದ್ದಾರೆ. ಆದರೂ ಪತ್ರವನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡಲು ಕಾರ್ಯದರ್ಶಿಗೆ ಸೂಚಿಸಿದ್ದೆ. 9ರಂದು ರಾಜೀನಾಮೆ ಪತ್ರಗಳನ್ನು ಪಡೆದಾಗ ಅದು ನಿಯಮದಂತೆ ಇರಲಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗಲು ತಿಳಿಸಿದ್ದೆ. ಕ್ರಮಬದ್ಧವಾಗಿ ಸಲ್ಲಿಸಲು ತಿಳಿಸಿದ್ದೆ. ಈ ಮಧ್ಯೆ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ, ಉಮೇಶ್ ಜಾಧವ್ ವಿರುದ್ಧವೂ ಅನರ್ಹತೆ ದೂರು ದಾಖಲಾಗಿತ್ತು.

       ಮೈತ್ರಿ ಸರಕಾರದ ಪತನದ ನಂತರ ಬಿಜೆಪಿ ಸರಕಾರ ರಚಿಸಲು ತಡ ಮಾಡುತ್ತಿರುವ ನಡುವೆಯೇ ರಾಣೆಬೆನ್ನೂರು ಶಾಸಕ ಆರ್. ಶಂಕರ್ ರನ್ನು ಅನರ್ಹಗೊಳಿಸಲಾಗಿದೆ ಎಂದು ಹಂಗಾಮಿ ಸ್ಪೀಕರ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ 15 ವಿಧಾನಸಭೆಯ ಅವಧಿ ಮುಗಿಯುವವರೆಗೆ (2023 ಮೇ ತಿಂಗಳವರೆಗೆ) ಅವರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.  

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap