ಕೊರಟಗೆರೆ
ರೈತರು ರಕ್ಷಣೆ ಮತ್ತು ಜಾನುವಾರುಗಳ ಮತ್ತು ಜಾನುವಾರುಗಳ ರಕ್ಷಣೆಗೆ ಸರಕಾರ ಬದ್ದವಾಗಿದೆ. ರೈತರಿಗೆ ಬೇಕಾಗುವಷ್ಟು ದಿನ ಮೇವು ಸರಬರಾಜು ಮಾಡುತ್ತೇವೆ. ರೈತರು ಚಿಂತಿಸುವ ಅಗತ್ಯವಿಲ್ಲ ನಿಮ್ಮ ಜೊತೆ ನಾವಿದ್ದೇವೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಶ್ರೀನರಸಿಂಹಗಿರಿ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ರೈತರ ಅನುಕೂಲಕ್ಕಾಗಿ ತೆರೆದಿರುವ ಮೇವುನಿಧಿ ಕೇಂದ್ರಕ್ಕೆ ಶುಕ್ರವಾರ ಬೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ಭರವಸೆ ನೀಡಿದರು.
ಮೇವುನಿಧಿಯ ಮೂಲಕ ರೈತರಿಗೆ ನೀಡುವಂತಹ ಮೇವುವನ್ನು ನ್ಯಾಯಯುತವಾಗಿ ನೀಡಬೇಕು. ಲೋಪ ಕಂಡು ಬಂದರೇ ನಾನು ಸುಮ್ಮನೇ ಇರುವುದಿಲ್ಲ. ರೈತರಿಗೆ ಬೇಕಾದ ಎಲ್ಲಾ ರೀತಿಯ ಬೇಡಿಕೆಯನ್ನು ಸಂಗ್ರಹಿಸಿ ಸರಕಾರಕ್ಕೆ ವರದಿ ಕಳುಹಿಸಿ. ಬರಗಾಲದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ರೈತರೊಂದಿಗೆ ಅಧಿಕಾರಿ ವರ್ಗ ಬೆರೆದು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಕೊರಟಗೆರೆ ತಾಲೂಕಿನ ಕೋಳಾಲ, ಕ್ಯಾಮೇನಹಳ್ಳಿ, ಬೈಲಾಂಜನೇಯ ಸ್ವಾಮಿ ದೇವಾಲಯ ಮತ್ತು ತೋವಿನಕೆರೆ ಗ್ರಾಮದಲ್ಲಿ ಮೇವುನಿಧಿ ಕೇಂದ್ರ ತೆರೆದು ಮೇವು ವಿತರಣೆ ಮಾಡುತ್ತೀದ್ದೆವೆ. ಇಲ್ಲಿಯವರೇಗೆ 8100ರೈತರಿಗೆ ಮೇವು ಕಾರ್ಡಿನ ಮೂಲಕ 81373ಜಾನುವಾರುಗಳಿಗೆ 3034ಟನ್ ಮೇವು ವಿತರಣೆ ಮಾಡಲಾಗಿದೆ ಎಂದು ತುಮಕೂರು ಪಶು ಇಲಾಖೆಯ ಉಪನಿರ್ದೇಶಕ ಪ್ರಕಾಶ್ ಕಂದಾಯ ಸಚಿವರಿಗೆ ಮಾಹಿತಿ ನೀಡಿದರು.
ಮೇವುನೀಧಿ ಕೇಂದ್ರಕ್ಕೆ ಬೇಟಿ ನೀಡಿದ ಕಂದಾಯ ಸಚಿವರು ಮೇವಿನ ಗುಣಮಟ್ಟ ಪರಿಶೀಲನೆ ನಡೆಸಿ ಮೇವು ದಾಸ್ತಾನಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೇವು ಪಡೆಯಲು ಬಂದಿದ್ದ ರೈತ ಮಹಿಳೆಯಿಂದ ಮೇವಿನ ಅನುಕೂಲ ಮತ್ತು ಸಮಸ್ಯೆಯ ಬಗ್ಗೆ ಗೌಪ್ಯವಾಗಿ ಮಾಹಿತಿ ಪಡೆದರು. ರೈತರ ಹೆಗಲ ಮೇಲೆ ಕೈಹಾಕಿ ಧೈರ್ಯವಾಗಿರಿ ನಿಮ್ಮ ಜೊತೆ ನಾವಿದ್ದೇವೆ ಹೆದರುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಬೇಟಿಯ ವೇಳೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶಕುಮಾರ್, ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಡಾ.ಶೋಭರಾಣಿ, ಜಿಪಂ ಸಿಇಓ ಶುಭಕಲ್ಯಾಣ್, ಪಶು ಇಲಾಖೆಯ ಉಪನಿರ್ದೇಶಕ ಪ್ರಕಾಶ್, ಸಹಾಯಕ ನಿರ್ದೇಶಕ ರಾಮಚಂದ್ರ, ಕೊರಟಗೆರೆ ತಹಶೀಲ್ದಾರ್ ಶಿವರಾಜು, ಇಓ ಶಿವಪ್ರಕಾಶ್, ಸಿಪಿಐ ನದಾಪ್, ಎಲೆರಾಂಪುರ ಗ್ರಾಪಂ ಅಧ್ಯಕ್ಷ ಸೀತರಾಮು, ಬ್ಲಾಕ್‍ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
