ಸಿಎಂ ವಿರುದ್ಧ ಅವಹೇಳನಕಾರಿ ಪದ ಬಳಕೆ : ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಆಕ್ರೊಶ

ಬೆಂಗಳೂರು:

       ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಲಾಗುವುದು ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೀರುಪಾಕ್ಷಿ ಹೇಳಿದ್ದಾರೆ.

       ರಾಯಚೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿರವಾರದ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಭಾಗ ವಹಿಸಿ ಮಾತನಾಡಿರುವ ಶಾಸಕರು,ಸಿಎಂ ವಿರುದ್ಧ ಮಾತನಾಡುವಾಗ ತಮ್ಮ ನಾಲಿಗೆ ಹರಿಬಿಟ್ಟಿರುವುದನ್ನ ಜೆಡಿಎಸ್ ಉಗ್ರವಾಗಿ ಖಂಡಿ ಸುತ್ತದೆ.ಇದೇ ರೀತಿಯಾಗಿ ತಮ್ಮ ವರ್ತನೆ ಮುಂದುವರಿಸಿದ್ದೇ ಆದ್ರೆ ನಾಲಿಗೆ ಕಟ್ ಮಾಡುವುದಾಗಿ ಎಚ್ಚರಿಸಿದ್ದಾರೆ.

         ಸಿಎಂ ವಿರುದ್ಧ ಮಾತನಾಡಿರುವುದಕ್ಕೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವುದಕ್ಕೆ ಒತ್ತಾಯಿಸಲಾಗುವುದು ಎಂದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ