ಶಾಸಕ ಟಿ.ರಘುಮೂರ್ತಿಯವರ ಪ್ರಯತ್ನದ ಕಾರ್ಯ ಪ್ರಶಂಸನೀಯ

ಚಳ್ಳಕೆರೆ

      ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ನೆಮ್ಮದಿ ದೊರೆಯುವುದು ತಮ್ಮದೇಯಾದ ಸೂರಿನಲ್ಲಿ ಬದುಕನ್ನು ನಡೆಸುವಾಗ. ಆದರೆ, ಕಳೆದ ಹಲವಾರು ದಶಕಗಳಿಂದ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿರುವ ಸಾವಿರಾರು ಕುಟುಂಬಗಳು ಸೂರು ಇಲ್ಲದೆ ಪರಿತಪಿಸುತ್ತಿದ್ದು, ಇವರೆಲ್ಲರಿಗೂ ಕರ್ನಾಟಕ ಕೊಳಗೇರೆ ಅಭಿವೃದ್ಧಿ ಮಂಡಳಿ ಮೂಲಕ 50 ವರ್ಷಗಳ ಕನಸನ್ನು ನನಸಾಗುವ ಈ ದಿನ ಇಲ್ಲಿನ ಎಲ್ಲರ ಬದುಕಲ್ಲೂ ಮಹತ್ವದ ದಿನವೆಂದು ಭಾವಿಸುವೆ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.

       ಅವರು, ಸೋಮವಾರ ಇಲ್ಲಿನ 18 ವಾರ್ಡ್‍ನಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಿರಿರುವ ಮನೆಗಳ ನಿರ್ಮಾಣ ಕಾರ್ಯದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿರುವ ಕೂಲಿ ಕಾರ್ಮಿಕರು, ಬಡವರು ತಮ್ಮ ಜೀವಮಾನದಲ್ಲೇ ಅಸಾಧ್ಯವಾದ ಕಾರ್ಯವನ್ನು ಸಾಧ್ಯವನ್ನಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ಧಾರೆ. ಇವರ ಈ ಸಾಧನೆ ನನಸಾಗಲು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಪರಿಶ್ರಮವೇ ಮೂಲ ಕಾರಣವೆಂದರು.

       ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಾರ್ಡ್‍ನ ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ, ನಗರದ 16,17 ಮತ್ತು 18ನೇ ವಾರ್ಡ್ ವ್ಯಪ್ತಿಯಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿಯವರು ಈ ಭಾಗದ ಬಡ ಜನರ ಪಾಲಿನ ಆರಾಧ್ಯದೈವವಾಗಿದ್ಧಾರೆ. ಕಳೆದ 30-40 ವರ್ಷಗಳಿಂದ ಈ ಭಾಗದಲ್ಲಿರುವ ಕೂಲಿ ಕಾರ್ಮಿಕರು ತಾವು ವಾಸಿಸುವ ಮನೆಗಳ ಹಕ್ಕು ಪತ್ರ ಪಡೆಯಲು ಭಗೀರಥ ಪ್ರಯತ್ನ ನಡೆಸಿದ್ಧಾರೆ. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಹಕ್ಕು ಪತ್ರ ನೀಡಿಲ್ಲ, ಈ ಭಾಗದ ಎಲ್ಲಾ ವರ್ಗದ ಬಡ ಜನರ ಕನಸ್ಸೆಂದರೆ ತಮ್ಮ ಬದುಕಿನ ಮೂಲ ಕನಸಾದ ಈಗ ವಾಸಿಸುವ ಜಾಗದ ಹಕ್ಕು ಪತ್ರ ಅವರಿಗೆ ಬೇಕಿದೆ.

          ಕೂಡಲೇ ಎಲ್ಲರಿಗೂ ಹಕ್ಕು ಪತ್ರ ನೀಡಬೇಕು. ಈ ಭಾಗದಲ್ಲಿ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕೆಂದರು. ರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಟಿ.ರಘುಮೂರ್ತಿ, ಕಳೆದ ನಗರಸಭಾ ಅವಧಿಯಲ್ಲಿಯೇ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ನಿರ್ಮಿಸುವ ಬಗ್ಗೆ ನಗರಸಭೆ ನಿರ್ಣಯಿಸಿತ್ತು. ಕಾರಣಾಂತರದಿಂದ ಯೋಜನೆ

          ಜೂರಾತಿಗೆ ವಿಳಂಬವಾಯಿತು. ನಗರದ ಮೂರು ವಾರ್ಡ್‍ಗಳ ವ್ಯಾಪ್ತಿಯ ಕೊಳಚೆ ಪ್ರದೇಶದಲ್ಲಿ 1127 ಮನೆಗಳನ್ನು 60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಪ್ರತಿಯೊಬ್ಬ ಫಲಾನುಭವಿಯು ನಿಗದಿ ಪಡಿಸಿದ ಹಣವನ್ನು ಮಂಡಳಿಗೆ ನೀಡಬೇಕಾಗುತ್ತದೆ. ಈ ಯೋಜನೆಯಿಂದ ಈ ಭಾಗದ ಎಲ್ಲಾ ಕಡುಬಡವರು ತಮ್ಮ ಮನೆಯ ಹಕ್ಕು ಪತ್ರದ ಜೊತೆಗೆ ಮನೆಯ ಒಡೆತನವನ್ನು ಸಹ ಪಡೆಯಲಿದ್ಧಾರೆ. ಈ ಭಾಗದ ಜನರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

          ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಟಿ.ಪ್ರಭುದೇವ್, ನಗರಸಭಾ ಸದಸ್ಯರಾದ ಕೆ.ಸಿ.ನಾಗರಾಜು, ಟಿ.ಮಲ್ಲಿಕಾರ್ಜುನ, ವೈ.ಪ್ರಕಾಶ್, ಸುಮಾಭರಮಣ್ಣ, ಚಳ್ಳಕೆರೆಯಪ್ಪ, ಕವಿತಾಬೋರಯ್ಯ, ಸುಮಕ್ಕ ಆಂಜನೇಯ, ಎಂ.ಸಾವಿತ್ರಿ, ಬಿ.ಟಿ.ರಮೇಶ್‍ಗೌಡ, ವಿರೂಪಾಕ್ಷ, ಎಚ್.ಪ್ರಶಾಂತಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಿ.ವೀರೇಶ್, ಎಚ್.ಆಂಜನೇಯ, ಗೀತಾಬಾಯಿ, ಆರ್.ಪ್ರಸನ್ನಕುಮಾರ್, ಅನ್ವರ್‍ಮಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap