ಬೆಂಗಳೂರು
ಮೇವಿಗಾಗಿ ರೈತರು ಸಂಗ್ರಹಿಸಿದ ರಾಗಿ ಹುಲ್ಲಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದು ಸುಮಾರು ಎರಡು ಲಕ್ಷ ರೂ. ಮೌಲ್ಯದ ಮೇವು ಬೆಂಕಿಗಾಹುತಿಯಾಗಿರುವ ಘಟನೆ ನೆಲಮಂಗಲದ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಕಿಯಿಂದ ರೈತ ಚಂದ್ರಪ್ಪ ಹಾಗೂ ಲಕ್ಷ್ಮಮ್ಮಗೆ ಸೇರಿದ ರಾಗಿ ಮೆದೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ.ಭಾನುವಾರ ಮುಂಜಾನೆ ದುಷ್ಕರ್ಮಿಗಳು ಹುಲ್ಲಿನ ಬಣವೆಗಳಿಗೆ ಬೆಂಕಿ ಇಟ್ಟಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಬಣವೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ಟ್ಯಾಂಕರ್ ಮೂಲಕ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಹುಲ್ಲಿನ ಬಣವೆಗಳು ಸುಟ್ಟು ಬೂದಿಯಾಗಿವೆ.
ಪಶು ಸಂಗೋಪನೆಯಲ್ಲಿ ತೊಡಗಿದ ರೈತರು, ಜಾನುವಾರುಗಳ ಮೇವಿಗಾಗಿ ರಾಗಿ ಹುಲ್ಲನ್ನು ಖರೀದಿ ಮಾಡಿ ಸಂಗ್ರಹಿಸಿದ್ದು ದುಷ್ಕರ್ಮಿಗಳು ಹುಲ್ಲಿನ ಬಣವೆಗಳಿಗೆ ಬೆಂಕಿ ಹಚ್ಚಿದರಿಂದ ಎರಡು ಲಕ್ಷ ಮೌಲ್ಯದ ಮೇವು ಬೆಂಕಿಗೆ ಅಹುತಿಯಾಗಿದೆ. ಬರಗಾಲದಲ್ಲಿ ಲಕ್ಷ ಲಕ್ಷ ಕೊಟ್ಟು ಖರೀದಿಸಿದ ಮೇವು ಬೆಂಕಿಗೆ ಅಹುತಿಯಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.ತ್ಯಾಮಗೊಂಡ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್‍ಗೆ ಬೆಂಕಿ
ಬಿಡದಿಯ ಈಗಲ್ಟನ್ ರೆಸಾರ್ಟ್ ಬಳಿ ಖಾಸಗಿ ಬಸ್‍ವೊಂದು ಧಗಧಗನೆ ಹೊತ್ತಿ ಉರಿದಿದ್ದು, ಬಸ್‍ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈಗಲ್ಟನ್ ರೆಸಾರ್ಟ್ ಬಳಿಯ ಗ್ಯಾರೇಜ್‍ನಲ್ಲಿ ರಿಪೇರಿಗೆ ನಿಲ್ಲಿಸಿದ್ದ ಬಸ್‍ಗೆ ಅಕಸ್ಮಿಕ ಬೆಂಕಿ ತಗುಲಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ