ರಾಗಿ ಖರೀದಿ ಕೇಂದ್ರದ ಎದಿರು ರೈತರ ದಿಢೀರ್ ಪ್ರತಿಭಟನೆ

ಹರಪನಹಳ್ಳಿ:

      ರಾಗಿ ಖರೀದಿ ಕೇಂದ್ರದಲ್ಲಿ ರೈತರು ಬೆಳೆದ ಎಲ್ಲಾ ರಾಗಿಯನ್ನು ಖರೀದಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ(ಹುಚ್ಚವ್ವನಹಳ್ಳಿ ಮಂಜುನಾಥಬಣ) ರಾಗಿ ಖರೀದಿ ಕೇಂದ್ರದ ಎದುರು ದೀಡೀರ್ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಜರುಗಿತು.

     ಪಟ್ಟಣದ ಹೊಸಪೇಟೆ-ಹರಿಹರ ರಸ್ತೆಯಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮು ಬಳಿ ವಿವಿಧ ಕಡೆಗಳಿಂದ ರೈತರು ನೋಂದಾಣಿ ಪ್ರಕಾರ ರಾಗಿಯನ್ನು ತಂದಿದ್ದು ಎಕ್ಕರೆ 10ಕ್ವಿಂಟಲ್ ಮಾತ್ರ ತೆಗೆದುಕೊಳ್ಳಲಾಗುವುದು ಎಂದು ಖರೀದಿ ಕೇಂದ್ರದಲ್ಲಿ ತಿಳಿಸಿದ್ದರಿಂದ ನೋಂದಾಣಿ ಸಮಯದಲ್ಲಿ 36 ಕ್ವಿಂಟಲ್ ಎಂದು ನಮೂದಿಸಿದ್ದು ಈಗ 24ಕ್ವಿಂಟಲ್ ತೆಗೆದುಕೊಂಡರೆ ಉಳಿದ ರಾಗಿಯನ್ನು ಏನು ಮಾಡಬೇಕು ಎಂದು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರು.

     ಜಿಲ್ಲಾ ವ್ಯವಸ್ಥಾಪಕ ಮುನಿರ್ ಭಾಷ್ ರೈತ ಮುಖಂಡರಿಗೆ ಸರ್ಕಾರದ ಆದೇಶದಂತೆ 1ಎಕ್ಕರೆಗೆ 10ಕ್ವಿಂಟಲ್‍ನಂತೆ ಗಣಕಯಂತ್ರದಲ್ಲಿ ನಮೂದಿನಂತೆ ರಾಗಿಯನ್ನು ಖರಿದಿಸಲಾಗುತ್ತಿದೆ. ಸರ್ಕಾರದ ನಿಯಮವನ್ನು ಪಾಲಿಸುತ್ತಿದ್ದೇವೆ. ನಿಮ್ಮ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

    ರೈತ ಸಂಘದ ಜಿಲ್ಲಾದ್ಯಕ್ಷ ಅರಸನಾಳು ಸಿದ್ದಪ್ಪ ಸರ್ಕಾರ ತಮಗೆ ಬಂದ ರೀತಿಯಲ್ಲಿ ನಿಯಮಗಳನ್ನು ಜಾರಿಗೊಳಿಸುವುದರಿಂದ ರೈತರನ್ನು ದಿಕ್ಕುತಪ್ಪಿಸುವಂತಾಗುತ್ತದೆ. ಸತತ ಬರದಿಂದ ಬಳಲಿದ್ದು ರೈತರು ಇದೀಗ ರಾಗಿಯನ್ನು ಉತ್ತಮವಾಗಿ ಬೆಳೆದಿದ್ದು ಇದಕ್ಕೆ ಬೆಂಬಲ ಬೆಲೆಗೆ ಮಾರಾಟ ಮಾಡಲು ಬಂದರೆ ಮಿತಿ ಹೇರುವುದು ಸರಿಯಲ್ಲ, ಆದ್ದರಿಂದ ರೈತರು ಬೆಳೆದ ಎಲ್ಲಾ ರಾಗಿಯನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಖರೀದಿ ಕೇಂದ್ರದ ವ್ಯವಸ್ಥಾಪಕ ರಾಮಚಂದ್ರ, ರೈತರಾದ ನೀಲಗುಂದದ ಚನ್ನಬಸಪ್ಪ, ಕುಬೇರ, ಹನುಮಂತಪ್ಪ, ಅಡಿಗಿ ಬಸವರಾಜ, ಸುರೇಶ್, ಮಂಜುನಾಥ, ಇತರರು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap