ರಾಗಿ ಖರೀದಿ ಕೇಂದ್ರವನ್ನು ಸೋಮವಾರ ಉದ್ಗಾಟನೆ

ತುರುವೇಕೆರೆ:

          ವರ್ಷ ವಿಡೀ ಬೆವರುಸುರಿಸಿ ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಆತುರ ಪಟ್ಟು ಅಗ್ಗದ ಬೆಲೆಗೆ ಮಧ್ಯವರ್ತಿ, ದಳ್ಳಾಳಿಗಳಿಗೆ ರಾಗಿ ಇನ್ನಿತರ ಬೆಳೆಗಳನ್ನು ಮಾರಬೇಡಿ ಸರ್ಕಾರ ಬೆಂಬಲಬೆಲೆಯಲ್ಲಿ ಕೊಳ್ಳುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

        ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ವತಿಯಿಂದ ಸರ್ಕಾರಿ ಸಹಾಯಧನದೊಂದಿಗೆ ಆರಂಭಗೊಂಡ ರಾಗಿ ಖರೀದಿ ಕೇಂದ್ರವನ್ನು ಸೋಮವಾರ ಉದ್ಗಾಟಿಸಿ ಮಾತನಾಡಿದ ಅವರು ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ 2897 ರೂಗಳನ್ನು ನೀಡಲಿದೆ. ಈ ದಿಸೆಯಲ್ಲಿ ರಾಗಿ ಬೆಳೆದ ರೈತರು ಪಹಣಿ, ಹೆಸರು, ವಿಳಾಸದೊಂದಿಗೆ ಬೆಳೆದ ರಾಗಿಯ ಸ್ಯಾಂಪಲ್ ನೀಡಿ ನಿಗಧಿತ ದಿನಾಂಕವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಆ ದಿನ ರಾಗಿಯನ್ನು ನೀಡಬಹುದು. ನಿಗಧಿತ ಅವಧಿಯಲ್ಲಿ ಮಾತ್ರ ನೊಂದಾಯಿಸಲ್ಪಟ್ಟ ರೈತರಿಂದ ರಾಗಿ ಖರೀದಿಸಲಿದ್ದು, ಕೃಷಿಕರು ಸಕಾಲಿಕವಾಗಿ ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಕ್ಕೆ ಬಿಡಬೇಕು ಎಂದರು.

          ಸರಳ ಸಮಾರಂಭದಲ್ಲಿ ಆಹಾರ ಮತ್ತು ನಾಗರೀಕ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಹೆಚ್, ಕೃಷ್ಣಯ್ಯ, ಖರೀದಿ ಅಧಿಕಾರಿ ಚಂದ್ರಶೇಖರಾಚಾರ್, ಆಹಾರ ನಿರೀಕ್ಷಕ ಕಿರಣ್‍ಕುಮಾರ್, ಆರ್‍ಎಂಸಿ ಅಧ್ಯಕ್ಷೆ ಬಿ,ಎಸ್.ಇಂದ್ರಮ್ಮ, ನಿರ್ಧೇಶಕ ರಾಜುಗೌಡ, ಡಿಸಿಸಿ ಬ್ಯಾಂಕ್‍ನ ಜಿಲ್ಲಾ ನಿರ್ಧೇಶಕ ಬಿ.ಎಸ್.ದೇವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಬಿಜೆಪಿ ತಾ|| ಅಧ್ಯಕ್ಷ ದುಂಡರೇಣುಕಪ್ಪ, ಪಂಚಾಕ್ಷರಿ, ಅರಳೀಕೆರೆ ಲೋಕೇಶ್, ಮಹಮದ್ ನಸ್ರುದ್ದೀನ್, ಆರ್‍ಎಂಸಿ ಮಂಜಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link