ಬೆಂಗಳೂರು :
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿರುವಂತ ನಟಿ ರಾಗಿಣಿ ದ್ವಿವೇದಿಗೆ, ಎನ್ ಡಿ ಪಿ ಎಸ್ ಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದಂತ ಜಾಮೀನಿ ಅರ್ಜಿಯನ್ನೇ ನ್ಯಾಯಪೀಠ ವಜಾಗೊಳಿಸಿತ್ತು. ಈ ಮೂಲಕ ಜೈಲೇ ಗತಿ ಎನ್ನುವಂತಾಗಿತ್ತು. ಹೀಗಾಗಿ ನಟಿ ರಾಗಿಣಿ ಜಾಮೀನು ಕೋರಿ ಇದೀಗ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ನಟಿ ರಾಗಿಣಿ ಪರ ವಕೀಲರು, ಜಾಮೀನು ಕೋರಿ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗೆ ನಟಿ ರಾಗಿಣಿ ಪರ ವಕೀಲರು ಸಲ್ಲಿಸಿರುವಂತ ಜಾಮೀನು ಅರ್ಜಿ, ಹೈಕೋರ್ಟ್ ನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ ಎನ್ನಲಾಗುತ್ತಿದೆ. ಹೈಕೋರ್ಟ್ ನಲ್ಲಿ ಆದ್ರೂ ನಟಿ ರಾಗಿಣಿಗೆ ಡ್ರಗ್ಸ್ ಕೇಸ್ ನಲ್ಲಿ ಜಾಮೀನು ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
