ತಿರುವನಂತಪುರಂ: 

ಶಬರಿಮಲೆ ವಿವಾದಾತ್ಮಕ ತೀರ್ಪಿನ ಮರುಪರಿಶಿಲನೆಗೆ ಸಂಬಂಧಿಸಿದಂತೆ ಹೋರಾಟಮಾಡುತ್ತಿರುವ ಹೋರಾಟಗಾರರ ಪೈಕಿ ಶಬರಿಮಲೆ ತಂತ್ರಿ(ಪೂಜಾರಿಗಳ) ಕುಟುಂಬದ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ನ್ನು ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದಡಿ ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲನೆ ಮಾಡುವುದಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ರಾಹುಲ್ ಈಶ್ವರ್ ಸಕ್ರಿಯರಾಗಿದ್ದರು. ಅಕ್ಟೋಬರ್ ನಲ್ಲಿ ಬಂಧನಕ್ಕೊಳಗಾಗಿರುವ ಪ್ರತಿಭಟನಾ ನಿರತರ ಸಂಖ್ಯೆ 3,346 ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
