ಪಾವಗಡ
ದೇಶದ ಪ್ರಗತಿಗೆ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು, ಸಮಗ್ರ ಹಾಗೂ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಬೇಕು ಈ ನಿಟ್ಟಿನಲ್ಲಿ ಯುವ ಕಾಂಗ್ರೇಸ್ ಕಾರ್ಯಕರ್ತರು ಈ ತಿಂಗಳ 18 ರದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಚಂದ್ರಪ್ಪ ರ ಗೆಲುವಿಗೆ ಶ್ರಮಸಬೇಕು ಎಂದು ಪಾವಗಡ ತಾಲ್ಲೂಕು ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷ ಅನಿಲ್‍ಕುಮಾರ್‍ಯಾದವ್ ಕರೇ ನೀಡಿದರು.
ಬುದುವಾರ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರೀಕಾಘೋಷ್ಟಿಯಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಸುಳ್ಳುಗಾರನಾಗಿದ್ದು,ಹಲವು ಯೋಜನೆಗಳ ಹೆಸರಿನಲ್ಲಿ ರಾಷ್ಟ್ರದ ಜನತೆಯ ದಿಕ್ಕು ತಪ್ಪಿಸುತ್ತಿದ್ದು, ಕೋಮುವಾದಿ ಬಿ.ಜೆ.ಪಿ. ಸರ್ಕಾರವನ್ನು ಸೋಲಿಸುವಂತೆ ತಿಳಿಸಿದರು, ಸರಳ ಸಜ್ಜಿನಿಕೆ ಹಾಗೂ ಪ್ರಮಾಣಿಕ ವ್ಯಕ್ತಿ ಎನ್, ಚಂದ್ರಪ್ಪ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿದ್ದು ಇವರ ಗೆಲುವು ನಿಶ್ಚಯವಾಗಿದೆ ಎಂದು ತಿಳಿಸಿದರು.ಘೋಷ್ಟಿಯಲ್ಲಿ ಯುವಘಟಕದ ಪದಾಧಿಕಾರಿಗಳಾದ ಶರತ್ ಬಾಬು,ಹರಿ, ಸುರೇಶ್,ರಘು, ಉಮೇಶ್, ರಾಮಾಂಜಿ ಮತ್ತಿತರಿದ್ದರು.