ಸಾಗರ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇತಿಯಲ್ಲಿ ಸೋಲುವುದು ಖಚಿತವಾಗಿದ್ದು, ಹೀಗಾಗಿಯೇ ಕೇರಳದ ವಯನಾಡಿಗೆ ಓಡಿದ್ದಾರೆ ಎಂದು ಕೇಂದ್ರ ಸಚಿವೆ, ಪ್ರತಿಸ್ಪರ್ಧಿ ಸ್ಮೃತಿ ಇರಾನಿ ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಎದುರು ಸೋಲುತ್ತೇನೆಂಬುದು ರಾಹುಲ್‌ಗೆ ಖಚಿತವಾಗಿದೆ. ಹೀಗಾಗಿ ಉತ್ತರ ಪ್ರದೇಶದ ಜೊತೆಗೆ ಕೇರಳದಿಂದಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸ್, ಭಾರತೀಯ ಸೇನೆಯ ನೈತಿಕತೆಯನ್ನು ನಾಶಪಡಿಸಿದೆ ಎಂದು ಸ್ಮೃತಿ ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








