ರಾಹುಲ್ ಸಮಾವೇಶದಲ್ಲಿ ಪ್ರತಿಧ್ವನಿಸಿದ “ಚೌಕಿದಾರ್ ಚೋರ್‌ ಹೇ” ಘೋಷಣೆ

ಅಮೇಥಿ

       ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕಿದಾರ್‌ ಜೋರ್‌ ಹೈ ಎಂದು ಹೇಳಿರುವುದಕ್ಕೆ ಸುಪ್ರೀಂಕೋರ್ಟ್‌ನಲ್ಲಿಂದು ವಿಷಾದ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಇಲ್ಲಿ ನಡೆದ ಚುನಾವಣಾ ಸಮಾರಂಭದಲ್ಲಿ ‘ಚೌಕಿದಾರ್’ ಎಂದು ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಜನಸಮೂಹ “ಚೋರ್ ಹೇ” ಎಂದು ಹೇಳುವ ಮೂಲಕ ಹೊಸ ತಂತ್ರ ಕಂಡುಕೊಂಡರು.

       2014ರ ಚುನಾವಣೆಯಲ್ಲಿ ಅಚ್ಚೇ ದಿನ್ ಆಯೇಂಗೆ ಎಂಬ ಘೋಷಣೆ ಕೂಗಲಾಯಿತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಚೌಕಿದಾರ್ ಎಂಬ ಘೋಷಣೆ ಕೂಗಲಾಗುತ್ತಿದೆ ಎಂದು ರಾಹುಲ್‌ ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಜನರು ‘ಚೋರ್ ಹೇ’ ಎಂದು ಘೋಷಣೆ ಕೂಗಿದರು.

        ಬಾರಬಂಕಿಯಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಆದರೆ ಅದು ಈಡೇರಿಲ್ಲ ಎಂದು ಹೇಳಿದರು.

      ಬಿಜೆಪಿ ಸರ್ಕಾರ ದೇಶದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಆದರೆ ಕಾಂಗ್ರೆಸ್ ಈಗ ನೀಡಿರುವ ಭರವಸೆಗಳು ಈಡೇರಲಿವೆ. ಪಕ್ಷ ಅಧಿಕಾರಕ್ಕೆ ಬಂದರೆ 22 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪಂಚಾಯತ್‌ಗಳಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ರಾಹುಲ್ ಅಮೇಥಿಯ ತಿಲೊಯಿಯಲ್ಲಿ ಹೇಳಿದರು.
ಪಕ್ಷ ಅಧಿಕಾರಕ್ಕೆ ಬಂದರೆ, ಮೂರು ತಿಂಗಳ ಒಳಗಾಗಿ ರೈತರ ಪರ ಬಜೆಟ್‌ ಮಂಡಿಸಲಾಗುವುದು. ಇದರೊಂದಿಗೆ ಇಡೀ ದೇಶಕ್ಕೆ ಪ್ರತ್ಯೇಕ ಬಜೆಟ್‌ ಮಂಡನೆಯಾಗಲಿದೆ ಎಂದು ಹೇಳಿದರು.

       ಬಡವರಿಗೆ ವಾರ್ಷಿಕ 72,000 ರೂ. ನೀಡುವ ನ್ಯಾಯ್ ಯೋಜನೆಯಲ್ಲದೆ, ಮೂರು ವರ್ಷಗಳ ಕಾಲ ಯುವಕರು ಉದ್ಯಮ ನಡೆಸಲು ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ರಾಹುಲ್ ಹೇಳಿದರು.

        ಕಾಂಗ್ರೆಸ್‌ ಆಡಳಿತದಲ್ಲಿ, ಸಾಲ ಮರುಪಾವತಿ ಮಾಡದ ರೈತರನ್ನು ಜೈಲಿಗೆ ಹಾಕಿರಲಿಲ್ಲ ಎಂದು ಹೇಳಿದ ಅವರು, ಅಮೇಥಿಯಿಂದ ಮೋದಿ ಕಿತ್ತುಕೊಂಡ ಎರಡರಷ್ಟನ್ನು ಅಮೇಥಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಮೇಥಿಯಲ್ಲಿ 150 ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು ಮತ್ತು ಫುಡ್‌ ಪಾರ್ಕ್‌ ತೆರೆಯಲಾಗುವುದು ಎಂದು ರಾಹುಲ್ ಭರವಸೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap