ನವದೆಹಲಿ:
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟ ಜೋರಾಗಿರುವ ಸಂದರ್ಭದಲ್ಲಿ ಹೊಸ ಹೇಳಿಕೆಯೊಂದು ಸದ್ದುಮಾಡುತ್ತಿದೆ ಅದೇ “ರಾಹುಲ್ ಗಾಂಧಿ ಒಬ್ಬ ಸುಳ್ಳಿನ ಸೃಷ್ಟಿಕರ್ತ. ರಫೇಲ್ ಡೀಲ್ ಕುರಿತು ದಿನೇ ದಿನೇ ಅವರೇ ಸುಳ್ಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದೆ. “ಅದು ಸಿಬಿಐ ನಿರ್ದೇಶಕರ ವಿಷಯದಲ್ಲಿರಬಹುದು ಅಥವಾ ರಫೇಲ್ ಡೀಲ್ ವಿಷಯಕ್ಕೆ ಸಂಬಂಧಿಸಿದ್ದಿರಬಹುದು, ರಾಹುಲ್ ಗಾಂಧಿ ನೀಡುವ ಹೇಳಿಕೆಗಳು ಸುಳ್ಳಿನ ಕಂತೆಗಳಿಂದ ತುಂಬಿವೆ. ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ.
ಕಾಂಗ್ರೆಸ್ ತಾಳ್ಮೆಯನ್ನು ಕಳೆದುಕೊಂಡಿದೆ” ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ದೂರಿದ್ದಾರೆ. “ಇಷ್ಟು ದಿನ ರಫೇಲ್ ಡೀಲ್ ಬಗ್ಗೆ ಸುಳ್ಳನ್ನು ಸೃಷ್ಟಿಸುತ್ತಿದ್ದರು. ಇದೀಗ ಸಿಬಿಐ ನಿರ್ದೇಶಕರ ವಿಷಯಕ್ಕೆ ಸುಳ್ಳು ಸೃಷ್ಟಿಸುತ್ತಿದ್ದಾರೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ಹುದ್ದೆಯಿಂದ ಕಿತ್ತೆಸೆಯಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಅವರನ್ನು ಕೇವಲ ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ” ಎಂದು ಜಾವ್ಡೇಕರ್ ಸ್ಪಷ್ಟನೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
