ಚಿತ್ರದುರ್ಗ:
ಕೇಂದ್ರ ಬಿಜೆಪಿ.ಸರ್ಕಾರ ರಫೇಲ್ ಹಗರಣ ನಡೆಸಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲದಿದ್ದರೂ ಕಾಂಗ್ರೆಸ್‍ನ ರಾಹುಲ್‍ಗಾಂಧಿ ರಾಜಕೀಯ ಲಾಭಕ್ಕಾಗಿ ಗೊಂದಲ ಹೇಳಿಕೆ ನೀಡುತ್ತ ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಕೂಡಲೆ ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಒತ್ತಾಯಿಸಿದರು.
ಬಿಜೆಪಿ.ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ರಫೇಲ್ ಹಗರಣ ನಡೆಸಿರುವುದಕ್ಕೆ ಸಾಕ್ಷ್ಯಗಳು ಇಲ್ಲದಿರುವ ಕಾರಣ ಹಗರಣವನ್ನು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಸಹ ರಾಹುಲ್‍ಗಾಂಧಿ ಚೌಕಿದಾರ್ ಚೋರ್ ಹೈ ಎಂದು ದೇಶದ ಪ್ರಧಾನಿ ನರೇಂದ್ರಮೋದಿರವನ್ನು ಕೇವಲವಾಗಿ ಮಾತನಾಡಿ ದೇಶದ ಜನರಿಗೆ ತಪ್ಪು ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎಂದು ಟೀಕಿಸಿದರು
2004 ರಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ.ಸರ್ಕಾರ ಯುದ್ದ ವಿಮಾನ ಖರೀಧಿಯಲ್ಲಿ ಹಲವಾರು ಕಾರಣಗಳನ್ನು ಕೊಟ್ಟು ಒಪ್ಪಂದ ಒಂದು ಹಂತಕ್ಕೆ ಬರದೆ ಮುಂದೂಡಿದ ಕಾರಣ ಏನು ಎಂಬುದನ್ನು ಮೊದಲು ರಾಹುಲ್‍ಗಾಂಧಿ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಅತ್ಯಾಧುನಿಕ ಯುದ್ದ ವಿಮಾನ ಖರೀಧಿ ರಫೇಲ್ ಹಗರಣವನ್ನು ಕೇಂದ್ರ ಸರ್ಕಾರ ತನಿಖೆ ನಡೆಸಲು ಸಿದ್ದವಿದ್ದರೂ ಇಲ್ಲಸಲ್ಲದ ಹಗರಣ ಸೃಷ್ಟಿಸಿರುವ ರಾಹುಲ್‍ಗಾಂಧಿ ಗೊಂದಲ ಹೇಳಿಕೆ ನೀಡಿದ್ದಾರೆ. ಸಂಸತ್‍ನಲ್ಲಿ ಏಕೆ ಚರ್ಚಿಸಲಿಲ್ಲ. ಜಂಟಿ ಸದನ ಸಮಿತಿ ರಚನೆಗೆ ಏಕೆ ಒಪ್ಪಿಗೆ ಕೊಡಲಿಲ್ಲ. ಗೌಪ್ಯವಾಗಿಡಬೇಕಾದ ದೇಶದ ರಕ್ಷಣೆ ವ್ಯವಸ್ಥೆ ಬಗ್ಗೆ ಭಾರತದ ಒಳಗೆ ಮತ್ತು ವಿದೇಶಗಳಲ್ಲಿ ಮಾತನಾಡಿರುವುದು ರಾಹುಲ್‍ಗಾಂಧಿಗೆ ಶೋಭೆಯಲ್ಲ.
ಕೇಂದ್ರ ಸರ್ಕಾರ ಯಾವುದೇ ರೀತಿಯ ಹಗರಣ ನಡೆಸದಿದ್ದರೂ ಮುಂದಿನ ಪಾರ್ಲಿಮೆಂಟ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ವಯಂ ಹಗರಣಗಳನ್ನು ಸೃಷ್ಟಿಸಿ. ರಫೇಲ್ ಗುತ್ತಿಗೆಯ ಕೆಲವು ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಹಗರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ದೇಶದ ರಕ್ಷಣೆ ಬಗ್ಗೆ ಚೆಲ್ಲಾಟವಾಡುತ್ತಿದ್ದಾರೆ.ಇದರಿಂದ ದೇಶದ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಯಿರುವುದರಿಂದ ರಾಹುಲ್‍ಗಾಂಧಿ ಬೇಷರತ್ತಾಗಿ ಕ್ಷಮೆ ಕೇಳಬೇಕು.
ಯಾವುದೇ ಕಪ್ಪುಚುಕ್ಕೆ ಇಲ್ಲದೆ ನಾಲ್ಕುವರೆ ವರ್ಷಗಳಿಂದ ಪಾರದರ್ಶಕವಾಗಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯನ್ನು ಚೋರ್ ಎಂದು ಹಾಸ್ಯ ಮಾಡಿರುವ ರಾಹುಲ್‍ಗೆ, ಕಾಂಗ್ರೆಸ್‍ಗೆ ಅನೇಕ ವೇದಿಕೆಗಳಲ್ಲಿ ಬಿಜೆಪಿ. ನೇರವಾಗಿ ಪ್ರಶ್ನಿಸಿರುವುದಕ್ಕೆ ಯಾವುದೇ ಉತ್ತರ ಬಂದಿಲ್ಲ ಎಂದು ಆಪಾದನೆಗೆ ತಿರುಗೇಟು ನೀಡಿದರು.
ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷರುಗಳಾದ ಟಿ.ಜಿ.ನರೇಂದ್ರನಾಥ್, ಸಿದ್ದೇಶ್‍ಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ರೈತ ಮೋರ್ಚ ಜಿಲ್ಲಾಧ್ಯಕ್ಷ ಡಿ.ರಮೇಶ್, ಭೀಮರಾಜ್, ಮಾಜಿ ಶಾಸಕ ರಾಮಯ್ಯ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.