ಬೆಂಗಳೂರು
ಅಕ್ರಮವಾಗಿ ನಡೆಸುತ್ತಿರುವ ಹುಕ್ಕಾ ಬಾರ್‍ಗಳ ಮೇಲೆ ಮತ್ತೆ ದಾಳಿ ಆರಂಭಿಸಿರುವ ಸಿಸಿಬಿ ಪೊಲೀಸರು ಹೊಸಕೆರೆಹಳ್ಳಿ ಲೇಔಟ್ ಹಾಗೂ ಸಂಜಯನಗರ ಸೇರಿ ಭಾನುವಾರ ರಾತ್ರಿ 2 ಕಡೆಗಳಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಹೊರವರ್ತೂರು ರಸ್ತೆಯ ಹೈಡ್ ಔಟ್ ಕೆಫೆಯಲ್ಲಿ ಹುಕ್ಕಾ ಬಾರ್ ನಡೆಸುತ್ತಿದ್ದ ತಿಗಳರಪೇಟೆಯ ರಾಘವೇಂದ್ರ(42) ನನ್ನು ಬಂಧಿಸಿ ಹುಕ್ಕಾ ಬಾರ್‍ಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಆರೋಪಿಯು ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುವುದಾಗಿ
ಸಂಜಯ್ ನಗರದ ಬಿಎಲ್ ರಸ್ತೆಯ ಸ್ಟ್ರೀಟ್ ಕೆಫೆಯಲ್ಲಿ ಹುಕ್ಕಾ ಬಾರ್ ನಡೆಸುತ್ತಿದ್ದ ಆರ್‍ಎಂವಿಯ ಇರ್ಫಾನ್ ನಾಗ್ಮೂರ್(28)ನನ್ನು ಬಂಧಿಸಿ, 4 ಸಾವಿರ ರೂ. ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಹುಕ್ಕಾ ಬಾರ್ ದಂಧೆ ನಡೆಸುತ್ತಿದ್ದ ಯುವಕರು, ಐಟಿಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಹುಕ್ಕಾ ಬಾರ್‍ನಲ್ಲಿ ಅವಕಾಶ ನೀಡಿ ಮಾದಕ ವ್ಯಸನಿಗಳಾಗಲು ಪ್ರೇರೇಪಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಡಾಟ್‍ಗೇಮ್ ಮೇಲೆ ದಾಳಿ
ಡಾಟ್ ಗೇಮ್ ಎಂಬ ಜೂಜಾಟದ ದಂಧೆಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 25 ಮಂದಿಯನ್ನು ಬಂಧಿಸಿದ್ದಾರೆ.ಬಂಧಿತ ರತನ್ ಲಾಲ್, ಕಿರಣ್ ಕುಮಾರ್, ಮಂಜುನಾಥ್, ಸತೀಶ್, ಶ್ರೀಧರ್, ದೀಪು, ಫಿಲ್ಮನ್ ರಾಜ್, ಚಂದ್ರ ನರಸಿಂಹ, ಕಲೀಂ ಪಾಷ, ಸಂಪತ್ ಸೇರಿ 25 ಆರೋಪಿಗಳ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಶೇಷಾದ್ರಿಪುರಂನ ಎನ್.ಸಿ. ರಸ್ತೆಯ ಬಾಲಾಜಿ ಮೆಂಬ ಕ್ಲಬ್‍ನಲ್ಲಿ ಅಕ್ರಮವಾಗಿ ಡಾಟ್ ಗೇಮ್ ಎಂಬ ಜೂಜಾಟದ ದಂಧೆ ನಡೆಸುತ್ತಿದ್ದ ಮಾಹಿತಿ ಆಧರಿಸಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 25 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 13,930 ನಗದು, 884 ಟೋಕನ್‍ಗಳು, ಡಾಟ್ ಬೋರ್ಡ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನುಬಾಹಿರವಾಗಿ ಹಲವು ದಿನಗಳಿಂದ ಬಾಲಾಜಿ ಮೆಂಬರ್ಸ್ ಕ್ಲಬ್‍ನಲ್ಲಿ ಡಾಟ್ ಗೇಮ್ ದಂಧೆ ನಡೆಸುತ್ತಿರುವುದು ದಾಳಿಯಿಂದ ಪತ್ತೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








