ಚಿತ್ರದುರ್ಗ:
ಎ.ಪಿ.ಎಂ.ಸಿ.ಯಲ್ಲಿರುವ ಕಲ್ಲೇಶ್ವರ ಪ್ರಾವಿಜನ್ ಸ್ಟೋರ್ಸ್ ಮೇಲೆ ನಗರಸಭೆಯವರು ಶನಿವಾರ ದಾಳಿ ನಡೆಸಿ ಸುಮಾರು ಐದುನೂರು ಕೆ.ಜಿ.ಪ್ಲಾಸ್ಟಿಕ್ ಐಟಂಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ ಹಾಗೂ ಆರೋಗ್ಯ ನಿರೀಕ್ಷಕರುಗಳು ಕಲ್ಲೇಶ್ವರ ಪ್ರಾವಿಜನ್ ಸ್ಟೋರ್ಸ್ನಲ್ಲಿ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರ್, ಕ್ಯಾರಿಬ್ಯಾಗ್, ಲೋಟಗಳು ಸಿಕ್ಕಿವೆ. ಇದೇ ರೀತಿ ಎ.ಪಿ.ಎಂ.ಸಿ.ಯಲ್ಲಿ ಇನ್ನು ಐದಾರು ಅಂಗಡಿಗಳ ಮೇಲೆಯೂ ದಾಳಿ ನಡೆಸಿ ಅಂದಾಜು ಐದುನೂರು ಕೆ.ಜಿ.ಯಷ್ಟು ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದು, ಕಲ್ಲೇಶ್ವರ ಪ್ರಾವಿಜನ್ ಸ್ಟೋರ್ಸ್ಗೆ ಬೀಗ ಜಡಿಯಲಾಗಿದೆ.
ರಾಜ್ಯ ಸರ್ಕಾರ 2016 ರಲ್ಲಿಯೇ ಯಾವುದೇ ರೀತಿಯ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಮಾರಾಟ ಮಾಡಬಾರದೆಂದು ಆದೇಶ ಹೊರಡಿಸಿದ್ದರೂ ಯಾವುದನ್ನು ಲೆಕ್ಕಿಸದೆ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಮಾರಾಟ ಮಾಡುವ ಇಂತಹ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರಾದ ಚಂದ್ರಪ್ಪನವರು ಅಂಗಡಿ ಮಾಲೀಕರುಗಳಿಗೆ ಎಚ್ಚರಿಸಿದರು.ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್ ಇನ್ಸ್ಪೆಕ್ಟರ್ಗಳಾದ ಸರಳ, ಭಾರತಿ, ಬಾಬುರೆಡ್ಡಿ, ಕಾಂತರಾಜ್, ನಾಗರಾಜ್, ಮಂಜುನಾಥ, ಅಶೋಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








