ನವದೆಹಲಿ :
ಭಾರತೀಯ ರೈಲ್ವೆ ಇಲಾಖೆ ಪ್ರಯಾಣ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸುಳಿವು ನೀಡಿದೆ ,ರೈಲುಗಳಲ್ಲಿನ ಎಲ್ಲಾ ಕ್ಲಾಸ್ ಗಳ ದರಗಳನ್ನು ಈ ವಾರದಲ್ಲಿ ಹೆಚ್ಚಿಸುವ ಯೋಚನೆ ಇದೆ ಎನ್ನಲಾಗಿದೆ. ಪ್ರಮುಖ ಹಿಂದಿ ಪತ್ರಿಕೆಯ ಲೇಖನವೊಂದರ ಪ್ರಕಾರ, ಪ್ರತಿ ಕಿಲೋಮೀಟರಿಗೆ 5 ರಿಂದ 40 ಪೈಸೆ ಹೆಚ್ಚಳವಾಗಲಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘೋಷಣೆ ವಿಳಂಬವಾಗಿದೆ ಆದರೆ ರೈಲು ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಪ್ರಧಾನಿ ಕಚೇರಿ ಈಗಾಗಲೆ ಅಂಗೀಕರಿಸಿದೆ ಎಂದು ತಿಳಿದು ಬಂದಿದೆ. ಆರ್ಥಿಕ ಕುಸಿತದ ಪರಿಣಾಮವು ರೈಲ್ವೆಯ ಆರ್ಥಿಕ ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.
ರಸ್ತೆ ಸಾರಿಗೆಯಿಂದ ಹೆಚ್ಚಿದ ಸ್ಪರ್ಧೆಯ ಹಿನ್ನೆಲೆಯಲ್ಲಿ, ಸರಕು ಸಾಗಣೆ ಶುಲ್ಕದ ಕೊರತೆಯಿಂದಾಗಿ ರೈಲ್ವೆ ಪ್ರಯಾಣಿಕರ ವಿಭಾಗದಿಂದ ಬರುವ ಆದಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕಳೆದ ಎರಡು ವರ್ಷಗಳಿಂದ ನೇರವಾಗಿ ಪ್ರಯಾಣ ದರವನ್ನು ನೇರವಾಗಿ ಹೆಚ್ಚಿಸಲಾಗಿಲ್ಲ. ಹಿಂದೆ, ಕೆಲವು ರೈಲುಗಳು ಫ್ಲೆಕ್ಸಿ ಶುಲ್ಕ ವ್ಯವಸ್ಥೆಯೊಂದಿಗೆ ಆದಾಯವನ್ನು ಹೆಚ್ಚಿಸಿವೆ ಮತ್ತು ಮರುಪಾವತಿ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಹೊಂದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ