ತಿಪಟೂರು :
ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ರೈಲ್ವೇ ನಿಲ್ದಾಣದ ಬಲಭಾಗದಲ್ಲಿರುವ ಗೋಡೆ ಬಾಗಷಃ ಕುಸಿದ್ದಿದ್ದು ರೈಲ್ವೆಇಲಾಖೆಯು ಎಚ್ಚರಿಕೆಗಾಗಿ ಶಿಟ್‍ಮುಚ್ಚಿದೆ.
ಕಳೆಪೆ ಕಾಮಗಾರಿಯಿಂದ ಅಂದರೆ ಕಾಂಪೌಂಡ್ ನಿರ್ಮಿಸಿ ಹಿಂಭಾಗದಲ್ಲಿ ಸೂಕ್ತರೀತಿಯ ಭದ್ರತೆಯನ್ನು ಮಾಡದೇ ಇದ್ದಿದ್ದರಿಂದ ಇಂದು ಬೆಲೆತೆರಬೇಕಾಗಿದೆ. ಭಾನುವಾರ ನಗರದಲ್ಲಿ ರೋಹಿಣಿ ಮಳೆಯು ಆರ್ಭಟಿಸಿ ಹೊನ್ನವಳ್ಳಿ ಹೋಬಳಿ 25.2ಎಂ.ಎಂ, ಕಸಬಾ ಹೋಬಳಿಯಲ್ಲಿ 24.2ಎಂ.ಎಂ, ನೊಣವಿನಕೆರೆ ಹೋಬಳಿ 13.9 ಎಂ.ಎಂ, ಮತ್ತು ಕಿಬ್ಬನಹಳ್ಳಿ ಹೋಬಳಿಯಲ್ಲಿ ಅತಿಕಡಿಮೆ 9ಎಂ.ಎಂ ಮಳೆಬಿದ್ದಿದ್ದು ಈ ತಿಂಗಳ ಕೊನೆವರೆಗೆ ಮಳೆ ಬಂದರೆ ಉತ್ತಮವಾಗಿ ಭೂಮಿಯನ್ನು ಹಸನುಮಾಡಿಕೊಂಡು ರಾಗಿಬೆಳೆಯಲು ರೈತರು ತಯಾರಿನಡೆಸುತ್ತಿದ್ದು ಮಳೆ ಕೃಪೆಗಾಗಿ ಕಾಯುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
