ಭಾರಿ ಮಳೆ : ಚಿತ್ರಯ್ಯನಹಟ್ಟಿ ವ್ಯಾಪ್ತಿಯ ಮನೆಗಳಿಗೆ ನುಗ್ಗಿದ ನೀರು.

ಚಳ್ಳಕೆರೆ

    ಭಾನುವಾರ ಬೆಳಗಿನ ಜಾವ ನಗರದಲ್ಲಿ ಸುರಿದ ಭಾರಿಮಳೆಯಿಂದ ಮನೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೀರು ನುಗ್ಗಿತ್ತಲ್ಲದೆ. ಇಲ್ಲಿನ ತಾಲ್ಲೂಕು ಮಡಿವಾಳ ವಿದ್ಯಾರ್ಥಿ ನಿಲಯವೂ ಸಹ ಮಳೆ ನೀರಿನಿಂದ ಆವೃತ್ತವಾಗಿತ್ತು.

   ಕೇವಲ ಕೆಲವೇ ಗಂಟೆಯಲ್ಲಿ ಬಂದ ಮಳೆ ನಗರದ ಸುತ್ತಮುತ್ತಲಿನ ತಗ್ಗು ಪ್ರದೇಶಗಳನ್ನು ನೀರಿನ ಭರ್ತಿಯಾಗುವಂತೆ ಮಾಡಿತ್ತಲ್ಲದೆ, ನೆಲದ ಮೇಲೆ ಬಿದ್ದ ನೀರು ಹರಿಯಲು ಜಾಗವಿಲ್ಲದೆ ಮನೆ ಹಾಗೂ ಆಸ್ಪತ್ರೆಗಳಿಗೆ ನುಗ್ಗಿದೆ. ಇಲ್ಲಿನ ಚಿತ್ರಯ್ಯನಹಟ್ಟಿ ವಾರ್ಡ್ ನಂ.6 ವ್ಯಾಪ್ತಿಯ ಈ ಪ್ರದೇಶದಲ್ಲಿರುವ ಖಾಸಗಿ ನರ್ಸಿಂಗ್ ಹೋಂ, ಮಡಿವಾಳ ಸಮಾಜದ ಹಿರಿಯ ಮುಖಂಡ ಮಾಚಿಪ್ರಭುವೀರಣ್ಣ ಹಾಗೂ ಎನ್.ಎಸ್.ಗೋಪಿನಾಥ ಎಂಬುವವರ ಮನೆಯೂ ಸಹ ನೀರಿನಲ್ಲಿ ಮುಳಿಗಿದ್ದು, ಮನೆಯ ಒಳಗಡೆ ಇದ್ದ ಜನ ಹೊರಗೆ ಬರಲು ಪರದಾಡಿದರು.

   ಕಳೆದ ಹಲವಾರು ವರ್ಷಗಳಿಂದ ಮಳೆ ಬಂದ ಸಂದರ್ಭದಲ್ಲಿ ಮನೆಯ ಸುತ್ತಮುತ್ತಲು ನೀರು ನಿಂತು ತೊಂದರೆಯಾಗುತ್ತಿದ್ದು, ಈ ಬಗ್ಗೆ ಇಲ್ಲಿನ ನಗರಸಭೆ ಆಡಳಿತ ಗಮನಹರಿಸುತ್ತಿಲ್ಲವೆಂಬ ಅಸಮದಾನವನ್ನು ಅಲ್ಲಿನ ನಿವಾಸಿಗಳು ವ್ಯಕ್ತಪಡಿಸಿದರು.

ಪೌರಾಯುಕ್ತರ ಭರವಸೆ 

    ವಾರ್ಡ್ ನಂ. 6 ವ್ಯಾಪ್ತಿಯ ಮಳೆಯ ನೀರು ಮನೆಗೆ ನುಗ್ಗಿದ ಬಗ್ಗೆ ಮಾಹಿತಿ ಪಡೆದ ಪೌರಾಯುಕ್ತ ಪಿ.ಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ವರ್ಷವಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದೊಡ್ಡದಾದ ಚರಂಡಿ ನೀರು ಹೋಗಲು ನಿರ್ಮಿಸಲಾಗಿದೆ. ಆದರೆ, ಸದರಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಈ ಸಮಸ್ಯೆ ತಲೆದೋರಿದ್ದು, ಶೀಘ್ರದಲ್ಲೇ ನೀರು ಹರಿಯಲು ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link