ಚಿತ್ರದುರ್ಗ
ಕೋಟೆ ನಾಡು ಚಿತ್ರದುರ್ಗದಲ್ಲಿ ತಡ ರಾತ್ರಿಯ ವರುಣನ ಅಬ್ಬರಕ್ಕೆ ಕೋಟೆ ನಾಡು ಅಕ್ಷರಶಃ ನಲುಗಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ತೆಗೆದು ಹಾಕಲು ಜನರು ಹರಸಾಹಸ ಪಡುವಂತಾಗಿದೆ.ಕೋಟೆ ನಾಡಿನಲ್ಲಿ ವರುಣ ಮತ್ತೆ ಅಬ್ಬರಿಸಿದ್ದಾನೆ. ನಿನ್ನೆ ತಡರಾತ್ರಿಯಲ್ಲಿ ವರುಣ ಅಬ್ಬರಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳಾದ ಕೆಳಗೋಟೆ, ಚನ್ನಕ್ಕಿ ಹೊಂಡಗಳಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಮನೆಯ ವಸ್ತುಗಳು ನೀರಿನಲ್ಲಿ ತೇಲಾಡುತ್ತಿವೆ.
ಇಂತಹ ಮಳೆ ನೀರನ್ನು ಹೊರ ಹಾಕಲು ರಾತ್ರಿಯಲ್ಲಾ ಜನರು ಹರಸಾಹಸ ಪಟ್ಟಿದ್ದಾರೆ. ಇದರ ನಡುವೆ ಕಳೆದ ೨೦ ದಿನಗಳ ಹಿಂದೆ ಕೋಡಿ ಬಿದ್ದಿದ್ದ ಮಲ್ಲಾಪುರ ಕೆರೆಯೂ ಮತ್ತೆ ಕೋಡಿ ಹೊಡೆದಿದೆ. ಇದರಿಂದ ಆ ಗ್ರಾಮದ ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದು ನಾಗರತ್ನಮ್ಮ ಹೇಳುತ್ಯಾರೆ.
ಇನ್ನು ಜಿಲ್ಲೆಯ ವಿವಿಧಡೆಗಳಲ್ಲಿ ಕೂಡ ವರುಣ ಅಬ್ಬರಿಸಿದ್ದಾನೆ. ಹಿತೇಗುಂಟನೂರು ಗ್ರಾಮದಲ್ಲಿ ಕೂಡ ಮನೆಗಳಿಗೆ ನೀರು ನುಗ್ಗಿದೆ. ಪ್ರತಿ ಬಾರಿಯೂ ಮಳೆ ಬಂದಾಗ ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಈ ವಿಚಾರದ ಬಗ್ಗೆ ಇಲ್ಲಿನ ಪಿಡಿಓ ಗಮನಕ್ಕೆ ತರಲಾಗಿದೆ.
ಮನೆಗಳಲ್ಲಿಜೀವನ ನಡೆಸುವುದು ಕಷ್ಟವಾಗಿದೆ.ನೆಗಳು ಶಿಥಿಲವಾಗಿದ್ದು, ಜೀವ ಕೈಯಲ್ಲಿಡಿದು ಬದುಕುತ್ತಿದ್ದೆವೆ. ಕೂಡಲೇ ಮಳೆನೀರು ಸರಿಯಾಗಿ ಹೊರಗೆ ಹೋಗುವಂತೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬ್ಬರಕ್ಕೆ ನಲುಗಿರುವ ಜನರು ಮನೆ ಮಠ ಕಳೆದುಕೊಳ್ಳುವ ಆತಂಕದಲ್ಲಿದ್ದು, ಇನ್ನು ಎರಡು ದಿನಗಳು ಮಳೆ ಹೀಗೆ ಬಂದರೆ ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ