ಅಂತರ್ಜಲ ಹೆಚ್ಚಳಕ್ಕೆ ಮಳೆಕೊಯ್ಲು ಅತ್ಯವಶ್ಯಕ

ಮಧುಗಿರಿ

     ಮಳೆ ಕೊಯ್ಲು ಪದ್ದತಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಿಕೊಂಡಾಗ ಮಳೆ ನೀರು ಶೇಖರಣೆಗೊಂಡು ಅಂತರ್ಜಲ ಮಟ್ಟ ವೃದ್ದಿಯಾಗಲು ಸಹಕಾರಿಯಾಗುತ್ತದೆ ಎಂದು ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಆರ್.ಕೆ. ಚಂದೋಲಿಯ ತಿಳಿಸಿದರು.

       ತಾಲ್ಲೂಕಿನ ಕಸಬಾ ವ್ಯಾಪ್ತಿಯ ಹರಿಹರಪುರ ಗ್ರಾಮದ ಸಮೀಪದ 2016-17ನೇ ಸಾಲಿನ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಚೆಕ್ ಡ್ಯಾಂ ನಿರ್ಮಾಣದಿಂದಾಗಿ ಸುತ್ತ್ತಮತ್ತಲಿನ ಬಾವಿಗಳಲ್ಲಿ ನೀರು ಮರುಪೂರಣವಾಗಿರುವುದನ್ನು ವೀಕ್ಷಿಸಿದರು. ಮಳೆಯ ನೀರಿನ ಶೇಖರಣೆಯ ಜೊತೆಗೆ ಜಲ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದು ತಿಳಿಸಿದರು.

       ಇದೇ ಸಂದರ್ಭದಲ್ಲಿ ಕೈಮರ ಮತ್ತು ಬೂತನಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆಯ ಸಹಯೋಗದಲ್ಲಿ ರೈತರು ಬೆಳೆದಿರುವ ಹುಣಸೆ ಬೆಳೆಗಳನ್ನು ವೀಕ್ಷಿಸಿ, ಪಟ್ಟಣದ ತಾಲ್ಲೂಕು ಪಂಚಾಯಿತಿ ಕಟ್ಟಡ ಹಾಗೂ ಪುರಸಭೆಯ ಆವರಣದಲ್ಲಿ ಹಳೆಯ ಬೋರ್‍ವೆಲ್‍ಗಳ ಸಮೀಪ ಮಳೆ ಕೊಯ್ಲು ಪದ್ದತಿಯ ಅನುಷ್ಠಾನ ಹಾಗೂ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ, ಮಳೆಯ ಕೊಯ್ಲು ಪದ್ದತಿ ಅಳವಡಿಕೆ, ಆಗುತ್ತಿರುವ ಖರ್ಚು ವೆಚ್ಚದ ಬಗ್ಗೆ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

       ಮುಖ್ಯಾಧಿಕಾರಿ ಲೋಹಿತ್ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿ 30 * 40 ಅಳತೆಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಕಡ್ಡಾಯವಾಗಿ ಮಳೆ ಕೊಯ್ಲು ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಮನೆಗಳ ನಿರ್ಮಾಣಕ್ಕೆ ಪರವಾನಗಿ ನೀಡುವುದಿಲ್ಲ ಎಂದು ಕೇಂದ್ರ ತಂಡಕ್ಕೆ ಮಾಹಿತಿ ಒದಗಿಸಿದರು.

       ಜಲಶಕ್ತಿ ತಂಡದಲ್ಲಿ ಉಪ ಕಾರ್ಯದರ್ಶಿ ಸಂಜಯ್ ಶ್ರೀವಾಸ್ತವ್, ಡಿಎಸಿ ಬಲರಾಮ್ ಪ್ರಸಾದ್ ಭೀಮಲ್ ಮತ್ತು ಬಿಎನ್‍ಓ ಕೆ.ಎ.ನಾಯ್ಡು, ತಾಂತ್ರಿಕ ಅಧಿಕಾರಿ ಜೆಎಸ್‍ಎ ಶ್ರೀಕಾಂತ್ ಕಾಂಬ್ಳೆ, ತಾಪಂ ಇಓ ದೊಡ್ಡಸಿದ್ದಯ್ಯ, ಮುಖ್ಯಾಧಿಕಾರಿ ಡಿ.ಲೋಹಿತ್, ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಸಾಮಾಜಿಕ ವಲಯದ ಅರಣ್ಯಾಧಿಕಾರಿ ಚಂದ್ರಪ್ಪ, ದಬ್ಬೇಘಟ್ಟ ಪಿಡಿಓ ಸುಬ್ಬರಾಜ ಅರಸ್, ಹರ್ಷದ್ ಹುಸೇನ್, ಮುಖಂಡ ಎಸ್‍ಬಿಟಿ ರಾಮು, ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap