ಬೆಂಗಳೂರು
ಸರ್ಕಾರ ಅಲ್ಪಮತಕ್ಕೆ ಕುಸಿದಿದ್ಗದರೂ ಎಂಜಿನಿಯರ್‍ಗಳಿಗೆ ಬಡ್ತಿನೀಡಿ ಕೆಲವರನ್ನು ವರ್ಗಾವಣೆ ಮಾಡಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ 500 ಕೋಟಿ ಹಣ ಗಳಿಸಿದ್ದಾರೆ ಎಂದು ವಿರುದ್ಧ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಸೋಮವಾರ ಸುಮಾರು 800 ಜನ ಎಂಜಿನಿಯರ್ ಗಳಿಗೆ ಬಡ್ತಿ ನೀಡಿ ಕೆಲವರನ್ನು ವರ್ಗಾವಣೆ ಮಾಡಿ ಇದಕ್ಕಾಗಿ 500 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಪರಿಶಿಷ್ಟಜಾತಿ ವರ್ಗ ಹಿಂದುಳಿದ ಸಮುದಾಯದ ಎಂಜಿನಿಯರ್‍ಗಳು ವರ್ಗಾವಣೆ ಮಾಡಿಸಿಕೊಳ್ಳಲು ಒಂದು ವರ್ಷದಿಂದ ಕಾಯುತ್ತಿದ್ದರು.ಇಂತಹ ಸಮಯದಲ್ಲಿ ಹಣ ಪಡೆದು ಏಕಾಏಕಿ ಮನಬಂದಂತೆ ಎಂಜಿನಿಯರ್‍ಳನ್ನು ವರ್ಗಾವಣೆ ಮಾಡಲಾಗಿದೆ.
ಈ ಕುರಿತು ಸೂಕ್ತ ತನಿಖೆ ನಡೆಸಿ, ಸರ್ಕಾರ ಮಾಡಿರುವ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರಿಗೆ ಲಿಂಗಮೂರ್ತಿ ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








