21ರಂದು ರೈತ ಸಂಘದಿಂದ ವಿಧಾನಸೌದಕ್ಕೆ ಮುತ್ತಿಗೆ

ತಿಪಟೂರು :

    ಎ.ಪಿ.ಎಂ.ಸಿ, ಭೂಸುಧಾರಣೆ, ವಿದ್ಯುತ್‍ ಖಾಸಗೀಕರಣಕ್ಕೆ ಮುಂತಾದ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆತರುತ್ತಿರುವುದು ನಮ್ಮನ್ನು ಗೆಲ್ಲಿಸಿದ ಪ್ರಜೆಗಳು ನಮ್ಮ ಮೇಲೆ ತಿರುಗಿ ಬಿಳುತ್ತಿದ್ದಾರೆಂಬ ಭಯವಿದೆ ಎಂದುರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್‍ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದರು.

     ನಗರದ ರೈತ ಭವನದಲ್ಲಿ ಸೆಪ್ಟಂಬರ್ 21 ರಂದು ಕೇಂದ್ರ ಸರ್ಕಾರದ ವಿವಿಧ ಕಾಯಿದೆಗಳಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿದ್ದಿದರೆ ವಿಧಾನಸೌಧಕ್ಕೆ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ ಅವರು ಭೂ ಸುಧಾರಣೆಯ ಕಾಯ್ದೆಯಲ್ಲಿ ಹಲವಾರು ದೋಷಗಳಿದ್ದು ಅವುಗಳೆಲ್ಲವು ಎಂ.ಎನ್.ಸಿ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಭೂಮಿಯನ್ನು ಮಾರಿ ರೈತರನ್ನು ಪಟ್ಟಣಕ್ಕೆ ವಲಸೆ ಹೋಗುವಂತೆ ಮಾಡುತ್ತಿದ್ದಾರೆ. ರೈತರು ಬೆಳೆಯುವ ಬೆಳಗೆಳಿಗೆ ಬೆಲೆ ಇಲ್ಲದಂತೆ ಮಾಡಿ ರೈತರಿಂದ ದವಸ ಧಾನ್ಯಗಳನ್ನು ಕಾಳ ಸಂತೆಯಲ್ಲಿ ಸಂಗ್ರಹಿಸಿ ಕೃತಕ ಅಭಾವವನ್ನು ಸೃಷ್ಠಿಸುತ್ತಾರೆ. ಇನ್ನು ಹಿಂದಿನ ಸರ್ಕಾರ ಅಂದು ಭೂಮಿ ಹಾಳು ಬೀಳುತ್ತದೆ ಎಂದು ಉಳುವವರಿಗೆ ಭೂಮಿ ಎಂದು ಮಾಡಿ ಸಣ್ಣ ಹಿಡುವಳಿದಾರರನ್ನು ಸೃಷ್ಠಿಸಿತ್ತು ಆದರೆ ಈಗಿನ ಕೇಂದ್ರ ಸರ್ಕಾರ ಸಣ್ಣ ಹಿಡುವಳಿದಾರರನ್ನು ನಿರ್ಗತಿಕರನ್ನಾಗಿ ಮಾಡಿ ಅವರ ಶವ ಪಟ್ಟಿಗೆ ಕೊನೆ ಮೊಳೆ ಹೊಡೆಯತ್ನಿಸಿರುವುದು ವಿಪರ್ಯಾಸ ಮತ್ತು ಈ ಸಣ್ಣ ಹಿಡುವಳಿದಾರರೇ ದೇಶವನ್ನು ಆಹಾರದಲ್ಲಿ ಸ್ವಾಲಂಬಿಯನ್ನಾಗಿ ಮಾಡಲು ಸಮರ್ಥರಿದ್ದಾರೆ ಇಂತಹ ಸಂದರ್ಭದಲ್ಲಿ ವಿದ್ಯುತ್‍ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿದ್ದಾರೆ.

     ಈ ಎಲ್ಲಾ ಸಮಸ್ಯೆಗಳು ರೈತರನ್ನು ಅನಾನುಕೂಲಕ್ಕೆ ದೂಡುತ್ತಿದ್ದು ರೈತರ ಬೆನ್ನೆಲುಬನ್ನೆ ಮುರಿದಿದ್ದಾರೆ ಆದ್ದರಿಂದ ಇವೆಲ್ಲಾ ಸಮಸ್ಯೆಗಳನ್ನು ಸೆಪ್ಟಂಬರ್ 21 ರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಸೂಕ್ತವಾದ ನೆರವನ್ನು ನೀಡುತ್ತಿಲ್ಲ ಇದರ ಬದಲು ರೈತರಿಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡುವಂತಹ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವುದು ಖಂಡನೀಯವಾದುದು ಇದರ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದು ಇದರಲ್ಲಿ ಎಲ್ಲಾ ರೈತರುಗಳು ಭಾಗವಹಿಸಬೇಕೆಂದು ಕರೆ ನೀಡಿದರು.ಪತ್ರಿಕಾ ಗೋಷ್ಠಿಯಲ್ಲಿ ಹಸಿರು ಸೇನೆ ಅಧ್ಯಕ್ಷ ತಿಮ್ಮಲಾಪುರ ದೇವರಾಜು, ಬೆಲೆಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಮತ್ತಿತರ ರೈತ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link