ಮಧುಗಿರಿ:
ಟಾರ್ಪಲ್ ನೀಡುತ್ತಿಲ್ಲಾ ಎಂದು ಆರೋಪಿಸಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಮುಂದೆ ನೂರಾರು ರೈತರು ಕೆಲ ಒತ್ತು ರಸ್ತೆಯಲ್ಲಿ ಕುಳಿತು ಶುಕ್ರವಾರ ಪ್ರತಿಭಟಿಸಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ 18 ನೇ ತಾರೀಖಿನಿಂದ ಟಾರ್ಫಲ್ ವಿತರಿಸುವುದಾಗಿ ಸೂಚನಾ ಫಲಕದಲ್ಲಿ ತಿಳಿಸಲಾಗಿತ್ತು ಆದರೆ ಕೃಷಿ ಅಧಿಕಾರಿ ರುಕ್ಮಿಣಿ ಸರಿಯಾಗಿ ಟಾರ್ಫಲ್ಗಳನ್ನು ವಿತರಿಸುತ್ತಿಲ್ಲಾ ಬೇಕಾದವರಿಗೆ ಮಾತ್ರ ಕೊಡುತ್ತಿದ್ದಾರೆ ರೈತರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲಾ ಕೆಲಸಕ್ಕೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲಾ ಎಂದು ಧಿಕ್ಕಾರ ಕೂಗಿ ವಾಹನಗಳನ್ನು ತಡೆದು ಪ್ರತಿಭಟಿಸಿದರು.
ರೈತ ಮಹಿಳೆ ಮಂಜಮ್ಮ ಮಾತನಾಡಿ ಎರಡು ಮೂರು ದಿನಗಳಿಂದ ಟಾರ್ಫಲ್ ನೀಡುವುದಾಗಿ ಹೇಳಿದ್ದ ಅಧಿಕಾರಿಗಳು ಈಗ ಟಾರ್ಪಲ್ ಖಾಲಿಯಾಗಿವೆ ಟರ್ಫಲ್ ವಿತರಿಸಬೇಕಾಗಿದ್ದ ಅಧಿಕಾರಿ ವರ್ಗಾವಣೆ ಆಗಿದ್ದಾರೆಂದು ಸಬೂಬು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು.
ಎಸ್ ಕೆ ರಂಗನಾಥ್ ಮಾತನಾಡಿ ನಾನು ಟಾರ್ಫಲ್ಗಾಗಿ ಅರ್ಜಿ ಸಲ್ಲಿಸಿದ್ದೇನೆ ಹಾಗೂ ಮೇಲಾಧಿಕಾರಿಯ ಸಹಿ ಮಾಡಿಸಿದ್ದೇನೆ ಆದರೆ ಇದೂವರೆವಿಗೂ ಟಾರ್ಫಲ್ ಇದ್ದರೂ ನೀಡುತ್ತಿಲ್ಲಾ ಕೃಷಿ ಅಧಿಕಾರಿ ರುಕ್ಮಿಣಿ ಎನ್ನುವವರು ಟಾರ್ಫಲ್ ವಿತರಿಸದೆ ನಿಮ್ಮ ಸಮೂದಾಯದವರಿಗೆ ಕೊಡುವುದಿಲ್ಲ ಹೋಗು ಹಾಗೂ ಮೇಲಾಧಿಕಾರಿಗಳ ಸೂಚನೆಗೂ ಈಕೆ ಗೌರವಿಸುತ್ತಿಲ್ಲಾ ರೈತರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲಾ ಎಂದು ಆರೋಪಿಸಿದರು.
ತಾಪಂ ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ ಇಲ್ಲಿ ಇಲಾಖೆಯ ಅಧಿಕಾರಿಗಳು ಕಡಲೆ ಕಾಯಿಯನ್ನು ಸಮಗ್ರವಾಗಿ ವಿತರಿಸುತ್ತಿದ್ದಾರೆ. ಕೇಂದ್ರ ಸ್ಥಾನವಾಗಿರುವುದರಿಂದ ಹಾಗೂ ಕಸಬ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದ್ದಾರೆ. ತಾಪಂ, ಜಿಪಂ ಸದಸ್ಯರು ಶಾಸಕರು, ಲೋಕಸಭಾ ಸದಸ್ಯರು ಕಡಲೆ ಕಾಯಿ ನೀಡುವಂತೆ ಪತ್ರಗಳನ್ನು ನೀಡಿದ್ದಾರೆ. ಕಡಲೆ ಕಾಯಿ ಒದಗಿಸಬೇಕಾಗಿದೆ ಹಾಗೂ ಮತ್ತಷ್ಟೂ ಅನುದಾನವು ಬೇಕಾಗಿದೆ ಎಂದರು.
ಸಂಜೀವಪುರದ ರೈತ ಮೈಲಾರಪ್ಪ ಮಾತನಾಡಿ ನನ್ನ ಜಮೀನನ್ನು ಉಳುಮೆ ಮಾಡಿದ್ದೇನೆ ಟಾರ್ಪಲ್ನ್ನು ಅಧಿಕಾರಿಗಳು ವಿತರಿಸಿದ್ದಾರೆ. ನಾನು ಮೊದಲ ದಿನದಂದೆ ಕಡಲೆಕಾಯಿಗೆಂದು ಅರ್ಜಿಯ ಜೊತೆಗೆ ಶಾಸಕ ಎಂ.ವಿ.ವೀರಭದ್ರಯ್ಯ ರವರು ನೀಡಿದ ಶಿಫಾರಸ್ಸು ಪತ್ರವನ್ನು ನೀಡಿದ್ದೇನೆ ಕೃಷಿ ಅಧಿಕಾರಿ ರುಕ್ಮೀಣಿ ಎನ್ನುವವರು ಮಾತ್ರ ಏನೂಬೇಕಾದರೂ ಮಾಡಿಕೊ ನಾನು ಇವತ್ತು ನಿನಗೆ ಕೊಡುವುದಿಲ್ಲಾ ಹೋಗು ಎಂದು ನನ್ನನ್ನು ಗದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಷಯ ತಿಳಿದ ಪೋಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಕಾರರನ್ನು ಮನವೊಲಿಸಿ ಟಾರ್ಫಲ್ ವಿತರಣೆಗೆ ಸೂಕ್ತ ಬಂದೊಬಸ್ತ್ ಕಲ್ಪಿಸಿದರು.ಪ್ರತಿಭಟನೆಯಲ್ಲಿ ಎಸ್ ಸಂಜೀವಯ್ಯ. ಮಂಜುನಾಥ್. ಶ್ರೀನಿವಾಸ್. ಕುಮಾರ್. ರಾಜಣ್ಣ, ಪುಟ್ಟಮ್ಮ, ರತ್ನಮ್ಮ, ನಾಗರತ್ನಮ್ಮ ಮತ್ತಿತರರು ಇದ್ದರು.