ರೈತರಿಗೆ ನೀರಿನ ಮಿತವ್ಯಯದ ಬಗ್ಗೆ ಪ್ರತಿಜ್ಞಾ ವಿಧಿ ಬೋದನೆ

ಹರಿಹರ

       ನಗರದ ಕೃಷಿ ಇಲಾಖೆ ಆವರಣದಲ್ಲಿ ಶುಕ್ರವಾರ ರೈತರಿಗೆ ನೀರಿನ ಮಿತವ್ಯಯದ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಸಹಾಯಕ ಕೃಷಿ ನಿರ್ದೇಶಕ ಪಿ. ಗೋವರ್ಧನ ಬೋಧಿಸಿದರು.

       ಕೃಷಿ ಇಲಾಖೆಗೆ ವಿವಿಧ ಗ್ರಾಮಗಳಿಂದ ಬಂದಂತಹ ರೈತರಿಗೆ ನೀರಿನ ಬಳಕೆಯ ಅರಿವು ಮೂಡಿಸಿದರು ಪ್ರತಿಜ್ಞಾ ವಿಧಿಯಲ್ಲಿರುವಂತೆ, ಜಲ ನಮ್ಮ ಜೀವನ ಮೂಲ, ಜಲ ಅಮೂಲ್ಯವಾದದ್ದು ಅದನ್ನು ಕಾಪಾಡಿಕೊಂಡು ಹೋಗುವ ಹೊಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

       ಜಲ ಸಾಕ್ಷರತೆಯನ್ನು ಪ್ರತಿಯೊಂದು ಕುಟುಂಬಕ್ಕೂ ತಲುಪಿಸುವಂತ ಕಾರ್ಯಗಳನ್ನು ಮಾಡುವುದರ ಜೋತೆಗೆ ಜಲ ಮೂಲಗಳನ್ನು ಪುನರುಚ್ಚೇತನಗೊಳಿಸಿ ಹೊಸ ಜಲ ಮೂಲಗಳನ್ನು ನಿರ್ಮಿಸುವುದರ ಮೂಲಕ ಜಲ ರಕ್ಷಣೆಗೆ ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಹೆಚ್ಚು ಮರಗಳನ್ನು ನೆಡುವುದರೊಂದಿಗೆ ನೀರನ್ನು ಉಳಿಸಿ ಕಾಡನ್ನು ಬೆಳಸಿ ಆರೋಗ್ಯವಂತ ಭೂಮಿ ನಿರ್ಮಾಣಕ್ಕೆ ಇಂದಿನ ಜನಾಂಗದ ಪಾತ್ರ ಬಹು ಮುಖ್ಯವಾಗಿದೆ ಎಂದು ತಿಳಿಸಿದರು.

      ಮುಂದಿನ ಭವಿಷ್ಯದ ಹೇಳಿಗೆಗೆ ನೀಡುವಂತೆ ಪ್ರತಿಜ್ಞೆ ಮಾಡುವುದರ ಮೂಲಕ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಜೀವನ್, ಮಲ್ಲಿಕಾರ್ಜುನ, ಚಂದ್ರಶೇಖರ್, ಹುಣಿಸಿ ಕಟ್ಟಿ, ದೇವೆಂದ್ರಪ್ಪ, ಪ್ರಸಾದ್ ಗಂಗನರಸಿ ಹಾಗೂ ಮತ್ತಿತರರು ಉಪಸ್ಥಿತರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap