ಪಾವಗಡ:
ರಾಜ್ಯದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಮತ್ತು ಸಂಸ್ಕರಿಸಲು ಪ್ರೋತ್ಸಾಹಿಸುವ ರೈತಸಿರಿ ಯೋಜನೆಗೆ ಪ್ರತಿ ಹೆಕ್ಟೇರ್ ಗೆ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿ ತಿಳಿಸಿದರು.
ಗುರುವಾರ ಪಾವಗಡದ ಅರ್. ಎಂ. ಸಿ. ಯಾರ್ಡನಲ್ಲಿ ರೈತರಿಗೆ ಬಿತ್ತನೆ ಶೇಂಗಾ ವಿತರಣೆ ಮಾಡಿ ಮಾತನಾಡಿ, ಅನಿಶ್ಚಿತಮಳೆ ಹಾಗೂ ಮಳೆಯ ಕೊರತೆಯಿಂದಾಗಿ ಮಳೆ ಆಶ್ರಿತ ಬೆಳೆಪ್ರದೇಶ ಗಣನೀಯವಾಗಿ ಕಡಿಮೆ ಯಾಗುತ್ತಿದೆ ಕೆಲವರು ವ್ಯವಸಾಯವನ್ನೇ ತೊರೆದಿದ್ದಾರೆ ಅಂತಹ ಪ್ರದೇಶದಲ್ಲಿ ಸಿರಿಧಾನ ಬೆಳೆಯಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಮತ್ತು ಪರ್ಯಾಯ ಬೆಳೆ ಯೋಜನೆ ರೂಪಿಸಲು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಮುಂದಿನ ವಾರ ಬೆಳೆ ವಿಮೆ ವಿತರಿಸಲು ಸೂಚಿಸಲಾಗಿದೆ ಜಿಲ್ಲೆಯಲ್ಲಿ ಪೂರ್ವಮುಂಗಾರು ಶೇಕಡ 23ರಷ್ಟು ಕೊರತೆ ಯಾಗಿರುವ ಕಾರಣ ಬಿತ್ತನೆಹಿನ್ನೆಡೆಯಾಗಿದೆ ಎಂದರು.
ರಾಜ್ಯಾಧ್ಯಂತ ಗೊಬ್ಬರ ಬೀಜ ದಾಸ್ತಾನು ಮಾಡಲಾಗಿದ್ದು ಯಾವುದೇ ಕೊರತೆ ಇಲ್ಲಾ, ಬೆಳೆ ವಿಮೆಯನ್ನು ಮಾರ್ಪಡಿಸಿದ್ದು ನೇರವಾಗಿ ರೈತರೆ ವಿಮಾ ಕಂಪನಿಗಳಿಗೆ ಪ್ರೀಮಿಯಂ ಕಟ್ಟಲಿದ್ದಾರೆ ಈ ಸಾಲಿನಲ್ಲಿ ಕೃಷಿ ಇಲಾಖೆ ಜೊತೆಗೆ ಬೆಳೆವಿಮೆ ಕಂಪನಿ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಇದ್ದು ರೈತರಿಗೆ ಬೆಳೆ ವಿಮೆ ಪ್ರೀಮಿಯಂ ಕಟ್ಟಿಸಿಕೊಳ್ಳಲಿದ್ದಾರೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಕಿಸಾನ್ ಯೋಜನೆ ಕಡ್ಡಾಯವಾಗಿ ಶೇಕಡ 100ರಷ್ಟು ಸಾಧನೆ ಅಗಬೇಕಿದೆ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು ರಾಜ್ಯ 8680739 ಜನ ರೈತರಿದ್ದು ಈವರೆಗೆ 1235876 ಜನ ರೈತರು ನೊಂದಣಿಯಾಗಿದ್ದಾರೆ.ಜಿಲ್ಲಾ ಇರುವ 515603 ರೈತರಲ್ಲಿ 82527 ಜನ ರೈತರು ನೊಂದಣಿಯಾಗಿದ್ದಾರೆ ರೈತರು ತ್ವರಿತವಾಗಿ ಧಾಖಲೆ ನೀಡಿ ನೊಂದಾಯಿಸಿಕೊಳ್ಳಲು ಮನವಿ ಮಾಡಿದರು.
ರಾಜ್ಯ ರೈತರಿಗೆ ಅನುಕೂಲವಾಗುವಂತೆ ಸ್ಮಾರ್ಟ್ ಕಾರ್ಡಗಳನ್ನು ನೀಡಲಾಗುವುದು ಇದರಿಂದ ಪ್ರತಿವರ್ಷ ಧಾಖಲೆಗಳನ್ನು ನೀಡುವುದನ್ನು ತಪ್ಪಿಸಿದಂತಾಗುತ್ತದೆ ಅಕಾರ್ಡ್ ನಲ್ಲಿ ರೈತರ ಜಮೀನು ಹಾಗು ಸ್ವತ್ತು ಹಾಗೂ ಸಾಲದ ಎಲ್ಲಾ ಮಾಹಿತಿ ಇರುತ್ತದೆ ಎಂದರು.
ಪಾವಗಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹುಣಿಸೇ ಹಣ್ಣು ಬೆಳೆಯುತ್ತಿದ್ದು, ನೆರೆಯ ಹಿಂದೂಪುರದ ಮಾರುಕಟ್ಟೆಗೆ ಹೋಗುತ್ತಿರುವುದರಿಂದ ಮಾರುಕಟ್ಟೆಯನ್ನು ಪಾವಗಡದಲ್ಲಿ ತೆರೆಯುವ ವಿಚಾರವಾಗಿ ಸಚಿವರ ಗಮನಕ್ಕೆ ತಂದಾಗ, ಇಲಾಖಾ ಆಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿ ತೇವಾಂಶ ಕೊರತೆಯಿಂದ ಪರ್ಯಾಯ ಬೆಳೆಯತ್ತಾ ರೈತ ಯೋಚನೆ ಮಾಡುವ ಅನಿವಾರ್ಯತೆ ಬಂದಿದೆ ಇಲ್ಲವಾದರೆ ರೈತರಿಗೆ ಬದುಕೇ ಇಲ್ಲಾ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಮಾ ಕಂಪನಿಯ ಅಧಿಕಾರಿಗಳು ಕೆ.ಒ.ಎಪ್. ಯೂನಿಯನ್ ಅಧ್ಯಕ್ಷ ರವೀಧ್ರರೆಡ್ಡಿ. ಕೆ.ಒ.ಎಪ್. ಜಿಲ್ಲಾ ಸಹಾಯಕ ವ್ಯವಸ್ಥಾಪಕ ಹೆಚ್.ಕೆ. ರಮೇಶ್ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ. ತಾಹಸೀಲ್ದಾರ್ ವರದರಾಜು, ಬಾಲಾಜಿ ಹಾಜರಿರಿದ್ದರು.