ರೈತರು ಸಿರಿಧಾನ್ಯ ಬೆಳೆದರೆ ಲಾಭ : ಕೃಷಿ ಉಪನಿರ್ದೇಶಕ ಅಶೋಕ್

ಮಿಡಿಗೇಶಿ

    ರಾಜ್ಯದ ಸಣ್ಣ ಹಿಡುವಳಿ, ದೊಡ್ಡ ರೈತರೆನ್ನದೆ ಎಲ್ಲಾ ರೈತರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಇತ್ತೀಚೆಗೆ ಕೃಷಿ ಸಚಿವರು ಪಾವಗಡ ಪಟ್ಟಣದಲ್ಲಿನ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ ಎಂದು ಜಿಲ್ಲಾ ಕೃಷಿ ಉಪನಿರ್ದೇಶಕ ಅಶೋಕ್ ತಿಳಿಸಿದರು.

     ಅವರು ಮಿಡಿಗೇಶಿಯಲ್ಲಿ ಸೋಮವಾರ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪಿ.ಎಂ ಕಿಸಾನ್ ಯೋಜನೆಯಡಿಯಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬ ರೈತನು ಅಗತ್ಯ ದಾಖಲಾತಿಗಳನ್ನು ಕೃಷಿ ಇಲಾಖೆಗೆ ಒದಗಿಸಿದಲ್ಲಿ ಪ್ರತಿ ರೈತನಿಗೆ ಮೂರು ಹಂತಗಳಲ್ಲಿ ಎರಡೆರಡು ಸಾವಿರ ರೂಗಳಂತೆ ಸಹಾಯಧನ ದೊರೆಯಲಿದೆ.

     ಸರ್ಕಾರವು ” ರೈತ ಸಿರಿ ಯೋಜನೆ’’ ಘೋಷಣೆ ಮಾಡಿದ್ದು, ಸಿರಿಧಾನ್ಯ ಬೆಳೆದಂತಹ ರೈತನಿಗೆ ಒಂದು ಎಕರೆಗೆ ನಾಲ್ಕು ಸಾವಿರ ರೂಪಾಯಿಗಳ ಸಹಾಯ ಧನ ದೊರೆಯಲಿದೆ.

      ಈ ಹಣವನ್ನು ಪಡೆಯಲಿಚ್ಚಿಸುವ ರೈತರು ಅಗತ್ಯ ದಾಖಲೆಗಳನ್ನು ನಿಗದಿತ ಸಮಯಕ್ಕೆ ಇಲಾಖೆಗೆ ಒದಗಿಸ ಬೇಕು. ಒಂದು ಹೆಕ್ಟೇರ್‍ಗೆ ಹತ್ತು ಸಾವಿರ ರೂಪಾಯಿಗಳು ಸಿಗಲಿದೆ. ಇದು ಎರಡು ಎಕರೆಯಲ್ಲಿ ಸಿರಿಧಾನ್ಯ ಬೆಳೆದ ರೈತನಿಗೆ ಅನ್ವಯವಾಗಲಿದೆ. ಸಿರಿಧಾನ್ಯ ಬಿತ್ತನೆ ಬೀಜದ ಕೊರತೆ ಗ್ರಾಮಾಂತರದಲ್ಲಿದ್ದು, ಕೃಷಿ ಇಲಾಖೆಯ ಕೇಂದ್ರ ಸ್ಥಾನಗಳಲ್ಲಿ ಬಿತ್ತನೆ ಬೀಜ ಒದಗಿಸುವ ¨ಗ್ಗೆ ಕೃಷಿ ಇಲಾಖೆಯ ಅಧ್ಯಕ್ಷರಲ್ಲಿ ಮಾತನಾಡುತ್ತೇನೆ. ರೈತರು ಜುಲೈ 30 ರ ಒಳಗಾಗಿ ವಿಮೆ ಮಾಡಿಸಿಕೊಳ್ಳಲು ಕಾಲಾವಕಾಶವಿದೆ ಎಂದು ತಿಳಿಸಿದರು.

      ಪ್ರಗತಿಪರ ರೈತ ಎಚ್.ರಾಮಕೃಷ್ಣಯ್ಯ, ಕೃಷಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಕೃಷಿ ಉಪ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಅನಿವಾರ್ಯತೆಯಿದೆ. ಕೃಷಿ ಇಲಾಖೆಯಲ್ಲಿ ಪದವಿ ಪಡೆದಂತಹ ಅಧಿಕಾರಿ ವರ್ಗ ಕೆಲಸ ನಿರ್ವಹಿಸುತ್ತಿದೆÉ. ಆದರೂ ಸಹ ಅವರಲ್ಲಿ ಕೆಲವು ರೀತಿಯ ಎಡರು ತೊಡರು ಹಾಗೂ ರೈತರು ಮತ್ತು ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ರೈತರು ಸಿರಿಧಾನ್ಯ ಬೆಳೆಗಳನ್ನು ಹೆಚ್ಚಿನದಾಗಿ ಬೆಳೆಯಲು ಮುಂದಾಗಬೇಕು. ಸಿರಿಧಾನ್ಯ ಬೆಳೆ ಬೆಳೆಯಲು ಖರ್ಚು ಕಡಿಮೆ, ಬೆಳೆ ಬಂದಲ್ಲಿ ಲಾಭಾಂಶ ಹೆಚ್ಚಾಗಲಿದೆ.

       ಸದರಿ ಬೆಳೆಗೆ ರಸಗೊಬ್ಬರಗಳ ಅವಶ್ಯಕತೆಯಿರುವುದಿಲ್ಲ. ಮನುಷ್ಯನಿಗೆ ಇಂದಿನ ದಿನಗಳಲ್ಲಿ ಸಿರಿಧಾನ್ಯಗಳ ಆಹಾರ ಬೇಕಾಗಿದೆ ಎಂದು ತಿಳಿಸಿ, ರಾಜ್ಯದಲ್ಲಿನ ಬಹುತೇಕ ರೈತರು ಶೇ. 50 ರಷ್ಟು ಭೂಮಿ ಬೆಳೆಯಿಡದೆ ಪಾಳು ಬಿಟ್ಟಿದ್ದಾರೆ ಎಂದರು. ಕಾರ್ಯಕ್ರಮವನ್ನು ಮಿಡಿಗೇಶಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಉದ್ಘಾಟಿಸಿದರು. ಬೇಡತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಮ್ಮ, ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜು, ಮೀನುಗಾರಿಕೆ ಇಲಾಖೆಯ ಅಧಿಕಾರಿ ರಂಗಸ್ವಾಮಯ್ಯ, ಪಶು ಇಲಾಖೆ ಅಧಿಕಾರಿಗಳು ಸುರೇಶ್, ಚೆನ್ನಲಿಂಗಪ್ಪ, ಜಿ.ಜಿ. ರಾಮಚಂದ್ರಯ್ಯ, ನರಸಿಂಹಯ್ಯ, ಮಿಡಿಗೇಶಿ ಕೃಷಿ ಅಧಿಕಾರಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link