ತುಮಕೂರು
ರಾಜೇಂದ್ರ ಅವರ ಹೇಳಿಕೆಯಿಂದ ನನ್ನ ರಾಜಕೀಯ ಜೀವನಕ್ಕೆ ತೊಂದರೆಯಾಗಲಿದ್ದು, ಯುವಕರಿಗೆ ಆದರ್ಶರಾಗಿರುವ ರಾಜೇಂದ್ರ ಅವರು ಮುಂದಿನ ದಿನಗಳಲ್ಲಿ ಬೆಳೆಸಬೇಕಿದೆ. ನಾನು ಕೂಡ ರಾಜಣ್ಣ ಅವರ ಶಿಷ್ಯರಲ್ಲಿ ಒಬ್ಬನಾಗಿದ್ದು, ಅವರ ಹೇಳಿಕೆಗಳಿಂದ ನನ್ನ ರಾಜಕೀಯ ಜೀವನಕ್ಕೆ ಧಕ್ಕೆಯಾಗುತ್ತಿದೆ ಎಂದು 22ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ರುದ್ರೇಶ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾನು ಸತತ 2 ವರ್ಷಗಳಿಂದ ಕೆಪಿಸಿಸಿಯಲ್ಲಿ ಮಾಸ್ಟರ್ ಟ್ರೈನರ್ ಆಗಿ 10 ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಜಿಲ್ಲಾ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದೇನೆ.
ಇದರಿಂದ ನನ್ನ ಕೆಲಸಕಾರ್ಯಗಳಿಗೆ ಮೆಚ್ಚಿ ಕೆಪಿಸಿಸಿ ಅಧ್ಯಕ್ಷರಿಂದ ಬಿ ಫಾರಂ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದೇ ಹೊರತು ಜಿಲ್ಲಾ ಮಟ್ಟದಲ್ಲಿ ಯಾವ ಜನಪ್ರತಿನಿಧಿಗಳ ಬಳಿ ಟಿಕೆಟ್ ಕೇಳಿರಲಿಲ್ಲ. ಆದರೆ ಟಿಕೆಟ್ ದೊರಕಿಸಿಕೊಡಲು ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರು ನನ್ನಿಂದ ಹಣ ಪಡೆದಿದ್ದಾರೆ ಎಂಬ ರಾಜೇಂದ್ರ ಅವರು ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ನಾನು ಯಾರಿಗೂ ಹಣ ನೀಡಿಯೇ ಇಲ್ಲ ಎಂದು ರಾಜೇಂದ್ರ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
22ನೇ ವಾರ್ಡ್‍ನಲ್ಲಿ ಸತತ ಮೂವತ್ತು ವರ್ಷಗಳಿಂದ ಜೆಡಿಎಸ್ ಕೋಟೆಯಾಗಿತ್ತು. ಅಲ್ಲಿ ಕಾಂಗ್ರೆಸ್‍ಗೆ 50 ರಿಂದ 100 ಮತಗಳು ಬರುವುದು ಕಷ್ಟಕರಾವಾಗಿತ್ತು. ಆದರೆ ಈ ಬಾರಿ 460 ಮತಗಳನ್ನು ಪಡೆದಿದ್ದೇನೆ. ಮುಂದಿನ ಬಾರಿ ಗೆಲುವು ಸಾಧಿಸಿಲಿದ್ದೇನೆ ಎಂದರಲ್ಲದೆ, ಚುನಾವಣೆ ವೇಳೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಒಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ