ಬೆಂಗಳೂರು
ಜೆಡಿಎಸ್ ಎಸ್‍ಸಿಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಆರ್.ಟಿ.ರಾಜಗೋಪಾಲ್ ಕೊಲೆಗೈದ ಪ್ರಮುಖ ಆರೋಪಿ ಕೌಶಿಕ್‍ನನ್ನು ಕನಕಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳೆಯ ದ್ವೇಷದ ಹಿನ್ನಲೆಯಲ್ಲಿ ಕಳೆದ ನ,12ರಂದು ಸಂಜೆ ರಾಮನಗರ ರಸ್ತೆಯ ಕನಕಪುರದ ಜನನಿ ಆಸ್ಪತ್ರೆ ಬಳಿ ಟೀ ಕುಡಿಯುತ್ತಿದ್ದಾಗ ಕೌಶಿಕ್,ರಾಮು ಅಪ್ಪು ಸೇರಿ ನಾಲ್ವರು ದುಷ್ಕರ್ಮಿಗಳು ರಾಜಗೋಪಾಲ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕನಕಪುರ ಪೊಲೀಸರ ವಿಶೇಷ ತಂಡ ತೋಟಹಳ್ಳಿ ಪೈಪ್‍ಲೈನ್‍ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲು ಮುಂದಾಗಿ ಗುಂಡು ಹಾರಿಸಿದ ವೇಳೆ ಇಬ್ಬರು ಗಾಯಗೊಂಡು ಸಿಕ್ಕಿಬಿದ್ದಾಗ ಪೆಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಕೌಶಿಕ್ ಪರಾರಿಯಾಗಿದ್ದ. ತಲೆಮರೆಸಿಕೊಂಡಿದ್ದ ಕೌಶಿಕ್ ಬಂಧನಕ್ಕೆ ಬಲೆ ಬೀಸಿದ್ದ ಕನಕಪುರ ಪೆಲೀಸರು, ಕೊನೆಗೂ ಚನ್ನಪಟ್ಟಣದಲ್ಲಿ ಬಂಧಿಸಿದ್ದಾರೆ.
ವಿದ್ವತ್‍ಗೆ ಭದ್ರತೆ
ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗ್ಯಾಂಗ್ ಉದ್ಯಮಿ ಪುತ್ರ ವಿದ್ವತ್‍ಗೆ ರಾಜಿ ಮಾಡಿಕೊಳ್ಳುವಂತೆ ಬೆದರಿಕೆ ಹಾಕುತ್ತಿರುವುದರಿಂದ ವಿದ್ವತ್‍ಗೆ ಪೊಳೀಸ್ ಭದ್ರತೆ ನೀಡಲಾಗಿದೆ.
ಮೇಲೆ ಯುಬಿ ಸಿಟಿಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಶ್ರೀಕೃಷ್ಣ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವಂತೆ ಎಂದು ಪದೇ ಪದೆ ವಿದ್ವತ್‍ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ.
ರಾಜಿ ಮಾಡಿಕೊಳ್ಳುವಂತೆ ಕಿರುಕುಳ ನೀಡಿ ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ವಿದ್ವತ್ ಕರೆ ಮಾಡಿ ದೂರು ನೀಡಿರುವ ಹಿನ್ಮಲೆಯಲ್ಲಿ ವಿದ್ವತ್‍ಗೆ ಭದ್ರತೆ ನೀಡುವಂತೆ ಸಂಜಯ್‍ನಗರ ಪೆಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಜೊತೆಗೆ ಆರೋಪಿ ಶ್ರೀಕೃಷ್ಣ ವಿದ್ವತ್‍ಗೆ ನಿರಂತರ ವಾಟ್ಸಪ್ ಕರೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನ ಜಾಮೀನು ರದ್ದುಗೊಳಿಸುವಂತೆ ಕೋರ್ಟ್‍ನಲ್ಲಿ ಅರ್ಜಿ ಹಾಕಲು ಕಬ್ಬನ್ ಪಾರ್ಕ್ ಪೆಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
