ರಾಜಕುಮಾರ್ 13ನೇ ಪುಣ್ಯತಿಥಿ : ಸ್ಮಾರಕಕ್ಕೆ ವಿಶೇಷ ಪೂಜೆ

ಬೆಂಗಳೂರು:

        ವರನಟ ಡಾ.ರಾಜ್ ಕುಮಾರ್ 13ನೇ ಪುಣ್ಯತಿಥಿ ನಿಮಿತ್ತ ಇಂದು ಕಂಠೀರವ ಸ್ಟೂಡಿಯೋದಲ್ಲಿ ವಿಶೇಷ ಪೂಜೆ ಸಲ್ಲಿಸಲಾ ಯಿತು.ಇಲ್ಲಿಯ ಅಣ್ಣಾವ್ರ ಹಾಗೂ ಪಾರ್ವತಮ್ಮನವರ ಸ್ಮಾರಕಗಳಿಗೆ ಅವರ ಕುಟುಂಬದವರು ಪುಪ್ಪ ನಮನ ಸಲ್ಲಿಸಿದರು.

        ಈ ವೇಳೆ ಮಾತನಾಡಿದ ನಟ ಶಿವಣ್ಣ, ರಾಘಣ್ಣ ಅಪ್ಪನ ಅಂಗಿ ಸಿನಿಮಾ ಮಾಡ್ತಿದ್ದಾರೆ.ಅಪ್ಪನಿಗೆ ಬಿಳಿ ಬಟ್ಟೆ ಅಂದ್ರೆ ತುಂಬಾ ಅಷ್ಟ. ಅವರಿಗೆ ಒಂದು ಸಾರಿ ಜೀನ್ಸ್ ಪ್ಯಾಂಟ್ ತೊಡಿಸಿ ಏರ್‍ಪೋರ್ಟ್‍ಗೆ ಕರೆದುಕೊಂಡು ಹೋಗಿದ್ದೆ ಎಂದು ಸ್ಮರಿಸಿದರು.

        ಅಲ್ಲದೆ ಇಂದಿರಾಗಾಂಧಿ ಹಾಗೂ ಡಾ.ರಾಜ್ ಚುನಾವಣಾ ಸಂದರ್ಭವನ್ನ ನೆನೆದ ಶಿವಣ್ಣ, ನಾವು ಅಗ ಚಿಕ್ಕವರು. ಅಪ್ಪಾಜಿ ಶೂಟಿಂಗ್‍ಗೆ ಬ್ರೇಕ್ ಕೊಟ್ಟು ಯಾವುದೋ ಹಳ್ಳಿಗೆ ಹೋಗಿದ್ರು. ಈ ಬಗ್ಗೆ ನಮಗೆ ಅಷ್ಟೊಂದು ನೆನಪಿಲ್ಲ.ಆದರೆ,ಅಪ್ಪಾಜಿಗೆ ರಾಜಕೀಯದ ಬಗ್ಗೆ ಆಸಕ್ತಿ ಇರಲಿಲ್ಲ ಎಂದರು.

        ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಪೂಜೆನಂತರ ಮಾತಮಾಡಿದ ಅಪ್ಪು, ನಮಗೆ ತುಂಬಾ ಒಳ್ಳೆಯ ಜೀವನ ತಂದೆ-ತಾಯಿಕೊಟ್ಟಿದ್ದಾರೆ. ಅವ್ರು ನೀಡಿದ ಪ್ರೀತಿ-ವಾತ್ಸಲ್ಯ ಎಂದೂ ಮರೆಯಲು ಸಾಧ್ಯವಿಲ್ಲ.ಒಳ್ಳೆಯ ಕಥೆ ಸಿಕ್ಕರೆ ನಾವು ಮೂವರು ಸಹೋದರರು ಪಿಆರ್‍ಕೆ ಪ್ರೊಡ ಕ್ಷನ್‍ನಲ್ಲಿ ನಟಿಸುತ್ತೇವೆ ಎಂದರು.

          ಕಳೆದ ವರ್ಷ ಅಮ್ಮನ ಮನೆ ಸಿನಿಮಾ ಮಾಡಿ ಅಮ್ಮನಿಗೆ ಅರ್ಪಸಿದ್ದೆ.ಈ ವರ್ಷ ಅಪ್ಪನ ಅಂಗಿ ಅನ್ನೋ ಸಿನಿಮಾ ಅಪ್ಪಾಜಿಗೆ ಅರ್ಪಿಸು ತ್ತಿದ್ದೇನೆ.ಈ ಚಿತ್ರ ಇಂದು ಲಾಂಚ್ ಆಗಿದೆ ಎಂದು ರಾಘಣ್ಣ ಹೇಳಿದರು.ಇನ್ನು ರಾಜ್ ಪುಣ್ಯ ಸ್ಮರಣೆಗೆ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ವಿಕಲಚೇತನರಿಗೆ ವ್ಹೀಲ್ ಚೇರ್ ವಿತರಿಸುವ ಮೂಲಕ ಅಣ್ಣಾವ್ರ ಸ್ಮಾರಕ ನೋಡುವುದಕ್ಕೆ ಅನುಕೂಲ ಮಾಡಿಕೊಟ್ಟರು. ಬೆಳಗ್ಗೆಯಿಂದಲೇ ಅಣ್ಣಾವ್ರ ಸಮಾಧಿ ಬಳಿಗೆ ಸಾವಿರಾರು ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸುತ್ತಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap