ರಾಜ್ಯಮಟ್ಟದ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಬಿಸಲಳ್ಳಿಯ ಜೋಡೆತ್ತಿನ ಬಂಡಿಗೆ ಪ್ರಥಮಸ್ಥಾನ

ಹರಿಹರ :

      ನಗರದ ಗ್ರಾಮ ದೇವತೆ ಊರಮ್ಮ ಜಾತ್ರೆ ಪ್ರಯುಕ್ತ ಕಸಬಾ ಗ್ರಾಮದೇವತೆ ಭಾಗದ ರೈತರುಗಳು ಅಮರಾವತಿ ಸಮೀಪದ ದೊಗ್ಗಳ್ಳಿ ರೈತರ ಜಮೀನಿನಲ್ಲಿಶನಿವಾರ ರಾಜ್ಯಮಟ್ಟದ ಜೋಡೆತ್ತಿನ ಬಂಡಿ (ಗಾಢ)ಓಟದ ಸ್ಪರ್ಧೆಯಲ್ಲಿ ಅತಿ ವೇಗವಾಗಿ ಓಡಿ ಬಿಸಲಳ್ಳಿಯ ಕುರುವತ್ತಿ ಬಸವೇಶ್ವರ ಜೋಡೆತ್ತಿನ ಬಂಡಿಯ ಪ್ರಥಮ ಸ್ಥಾನ ಪಡೆದಿರುತ್ತದೆ.

       ಹಿಂದಿನ ಸ್ಪರ್ಧೆಗಳಲ್ಲಿ ಬಿಸಿಲಳ್ಳಿ ಕುರುವತ್ತಿ ಬಸವೇಶ್ವರ ಜೋಡೆತ್ತಿನ ಬಂಡಿ ಪ್ರಥಮ ಸ್ಥಾನ ಪಡೆದರೆ, ಹಾವೇರಿಯ ಹೇಮಗಿರಿ ಪ್ರಸನ್ನ ಜೋಡೆತ್ತಿನ ಬಂಡಿ ದ್ವಿತೀಯ ಸ್ಥಾನ ಪಡೆದು,ತೃತೀಯ ಸ್ಥಾನವನ್ನು ಕೊದನೂರಿನ ಜೈ ಹನುಮಾನ್ ಪ್ರಸನ್ನ ಜೋಡೆತ್ತಿನ ಬಂಡಿಯ ಪಡೆಯಿತು. ಹಾಗೂ ಹಾರೋಗೊಪ್ಪ ಸಿದ್ಧಾರೂಢ ಪ್ರಸನ್ನ ಜೋಡೆತ್ತಿನ ಬಂಡಿಯ ನಾಲ್ಕನೇ ಸ್ಥಾನ ಪಡೆದುಕೊಂಡಿತು.

     ಈ ಸ್ಪರ್ಧೆಯಲ್ಲಿ ಬ್ಯಾಡಗಿಯ ಚಂದ್ರಗುತ್ಯಮ್ಮ,ಗಂಗ್ಯಾನೂರ ದುರ್ಗಾದೇವಿ ಪ್ರಸನ್ನ, ಹಿರೇಬಿದರಿ ಕುರುವತ್ತಿ ಬಸವೇಶ್ವರ,ಕೋಡಿಹಳ್ಳಿಯ ದಿಲ್ದಾರ್, ಹರ್ಲಾಪುರದ ಮೌನೇಶ ಬಂಡಿಗಳು ಭಾಗವಹಿಸಿ ಸಮಾಧಾನಕರ ಬಹುಮಾನಗಳನ್ನು ಗಳಿಸಿದವು.ಕಳೆದ ವಾರವೂ ಸಹ ಇದೇ ಜಾತ್ರೆಯ ಸಲುವಾಗಿ ಮಾಚೇನಹಳ್ಳಿಯ ರೈತರು ಸಹ ಇದೇ ರೀತಿಯ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಶೇಷವಾಗಿ ನಡೆದ ಈ ಸ್ಪರ್ಧೆಯನ್ನು ರಾಜ್ಯದ ನಾನ ಭಾಗಗಳಿಂದ ಆಗಮಿಸಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link