ಶಿರಾ
ಶಿರಾ ನಗರದವರೆ ಆದ ರಾಜ್ಯಸಭೆಯ ಮಾಜಿ ಸದಸ್ಯ ಮಾಲಿ ಮದ್ದಣ್ಣ ಬೆಂಗಳೂರಿನಲ್ಲಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ.
82 ವರ್ಷ ವಯಸ್ಸಿನ ಮಾಲಿ ಮದ್ದಣ್ಣ 1981-86 ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಶಿರಾ ಟಿಎಪಿಸಿಎಂಎಸ್, ಶಿರಾ ಟೌನ್ ಕೋ ಆಪರೇಟೀವ್ ಬ್ಯಾಂಕ್, ಟೌನ್ ವಿವಿಧೋದ್ದೇಶ ಸಹಕಾರಿ ಭಂಡಾರದ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದ ಮಾಲಿ ಮದ್ದಣ್ಣ, ಪತ್ನಿ ಹಾಗೂ ಪುತ್ರಿ ಸೇರಿದಂತೆ ಅಪಾರವಾದ ಬಂಧು-ಬಳಗವನ್ನು ಅಗಲಿದ್ದಾರೆ.
ಗುರುವಾರ ಮಧ್ಯಾಹ್ನ 3 ಗಂಟೆಗೆ ಮಾಲಿ ಮದ್ದಣ್ಣ ಅವರ ಪಾರ್ಥಿವ ಶರೀರವನ್ನು ಶಿರಾ ನಗರದ ಹನುಮಾನ್ ಬಸ್ ಶೆಡ್ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಮೀಪದ ಮಾಲಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಮೃತ ಮಾಲಿ ಮದ್ದಣ್ಣ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಶಾಸಕ ಬಿ.ಸತ್ಯನಾರಾಯಣ್, ಮಾಜಿ ಸಚಿವ ಎಚ್.ಕೆ.ಪಾಟೀಲ್, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಎಸ್.ಆರ್.ಪಾಟೀಲ್, ತಹಸೀಲ್ದಾರ್ ನಾಹಿದಾ ಜಮ್ ಜಮ್, ಕುಂಚಿಟಿಗರ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್.ತ್ಯಾಗರಾಜು, ಕುಂಚಿಟಿಗರ ಸಂಘದ ಕಾರ್ಯದರ್ಶಿ ಆರ್. ನಾಗರಾಜು, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಹಿರಿಯ ಸಹಕಾರಿ ಎಸ್.ಎನ್.ಕೃಷ್ಣಯ್ಯ, ಡಿ.ಸಿ.ಅಶೋಕ್, ಷಣ್ಮುಖಪ್ಪ, ಮಾಲಿ ಪ್ರಕಾಶ್, ನೇರಲಗುಡ್ಡ ಶಿವಕುಮಾರ್, ಎಸ್.ಜೆ.ರಾಜಣ್ಣ, ಅರೇಹಳ್ಳಿ ರಮೇಶ್, ಮಾಲಿ ಸುರೇಶ್, ಆರ್.ರಾಘವೇಂದ್ರ, ಆರ್.ರಾಮು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








