ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಬಸ್ ನಿಲ್ದಾಣದ ಬಳಿ ತಾ-24-11-2018ರ ಶವಿವಾರ ಬೆಳ್ಳಿಗ್ಗೆ ಇಲ್ಲಿನ ಪ್ಯಾಸೆಂಜರ್ ಆಟೋ ಸಂಘದವರಿಂದ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಮಿಡಿಗೇಶಿ ಪೋಲೀಸ್ ಠಾಣಾಧಿಕಾರಿ ಪುರುಷೋತ್ತಮ್ ಜಿ.ರವರಿಗೆ ಪುಷ್ಪಮಾಲೆ ಸಮರ್ಪಿಸಿ ಆಟೋಗಳಿಗೆ ಬಾಳೆಯ ಕಂದುಗಳನ್ನು ಕಟ್ಟಿ,ಹೂವಿನ ಅಲಂಕಾರಗೊಳಿಸಿ ಆಟೋ ಚಾಲಕರೆಲ್ಲರೂ ಸಮವಸ್ತ್ರ ಧರಿಸಿಕೊಂಡು,ಮಿಡಿಗೇಶಿ ಹನುಮಂತಪುರ,ತೋಟಮಡುಲು,ಛತ್ರಪಾಳ್ಯ ,ನಾಗಲಾಪುರ,ಶ್ರವಣಗುಡಿ,ರೆಡ್ಡಿಹಳ್ಳಿ ಕಸಾಪುರ ಗ್ರಾಮಗಳಿಗೆ ಸೇರಿದ ಎಲ್ಲಾ ಆಟೋ ಚಾಲಕರುಗಳು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮ ಕೊನೆಯಲ್ಲಿ ಮೈಸೂರುಪಾಕ್ (ಸ್ವೀಟ್)ನ್ನು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಎಲ್ಲರಿಗೂ ವಿತರಿಸುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.