ಹಿರಿಯೂರು :
ಕನ್ನಡವು ಅತ್ಯಂತ ಪುರಾತನ ಹಾಗೂ ಶ್ರೀಮಂತ ಭಾಷೆಯಾಗಿದೆ, ಆದರೆ ಇಂದು ಅನೇಕ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿರುವುದು ವಿಷಾದನೀಯ, ಇಂದು ಕನ್ನಡ ಭಾಷೆ ಜೀವಂತವಾಗಿರುವುದು ನಮ್ಮ ಗ್ರಾಮೀಣ ಭಾಗದ ಜನರಿಂದ ಎಂಬುದಾಗಿ ವಾಣಿಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಧರಣೇಂದ್ರಯ್ಯನವರು ತಿಳಿಸಿದರು.
ನಗರದ ರೋಟರಿ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿಸಂಸ್ಥೆ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರರವರು ಮಾತನಾಡಿ ಕನ್ನಡನಾಡು, ನುಡಿ ಹಾಗೂ ನೆಲ-ಜಲ ರಕ್ಷಣೆಗಾಗಿ ನಮ್ಮ ಯುವಜನಾಂಗ ಮುಂದಾಗಬೇಕು ಎಂಬುದಾಗಿ ಕರೆ ನೀಡಿದರು.
ಸಮಾರಂಭದಲ್ಲಿ ರೋಟರಿ ಕಾರ್ಯದರ್ಶಿ, ಹೆಚ್.ವೆಂಕಟೇಶ್, ಎಂ.ವಿ.ಹರ್ಷ, ಎಂ.ರಾಘವೇಂದ್ರ, ಹೆಚ್.ಆರ್.ಶಂಕರ್, ಡಾ|| ಎಂ.ಎನ್.ಶ್ರೀಪತಿ, ಇನ್ನು ಮುಂತಾದವರು ರೋಟರಿ ಸದಸ್ಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
