ರಕ್ತ ಕೊಟ್ಟು ಜೀವ ಉಳಿಸುವುದೇ ಪುಣ್ಯದ ಕೆಲಸ

ಚಿತ್ರದುರ್ಗ:

    ಎಲ್ಲಕ್ಕಿಂತ ರಕ್ತದಾನವೇ ಅತ್ಯಂತ ಶ್ರೇಷ್ಠವಾದದ್ದು.ಹೀಗಾಗಿ ಪ್ರತಿಯೊಬ್ಬರಲ್ಲೂ ಇಂದು ರಕ್ತದಾನ ಮಹತ್ವದ ಕುರಿತು ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಕರೆ ನೀಡಿದರು
ನಗರದ ಪ್ರತಿಷ್ಠಿತ ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆಯ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯವತಿಯಿಂದ ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ವಿಶ್ವರಕ್ತದಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಸ್ವಯಂಪ್ರೇರಿತ ರಕ್ತದಾನದ ಮಹತ್ವ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ರಕ್ತದ ಗುಂಪನ್ನು ಅರಿಯುವುದು ಅವಶ್ಯಕವಾಗಿದ್ದು, ಇದರಿಂದ ತುರ್ತು ಸಂದರ್ಭದಲ್ಲಿ ಶೀರ್ಘವಾಗಿ ರಕ್ತ ಸ್ವೀಕರಿಸಲು ಹಾಗೂ ರಕ್ತದಾನ ಮಾಡಲು ಸಹಾಯಕವಾಗುತ್ತದೆ.

      ಮಕ್ಕಳು ಮತ್ತು ವಿದ್ಯಾವಂತ ಯುವಕರು ಮೊದಲು ರಕ್ತದ ಅವಶ್ಯಕತೆಗಳ ಕುರಿತು ತಿಳಿದುಕೊಳ್ಳಬೇಕು ಎಂದು ನುಡಿದರು
ಮಾನವನ ದೇಹದಲ್ಲಿ ರಕ್ತವು ಖಾಲಿಯಾದಂತೆ ಉತ್ಪತ್ತಿಯಾಗುವ ಗುಣ ಹೊಂದಿದೆ, ನಗರದ ಆರೋಗ್ಯವಂತ ಯುವ ಜನತೆಗೆ, ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು ಈ ಆಚರಣೆಯ ಮುಖ್ಯ ಧ್ಯೆಯ. “ರಕ್ತ ಜೀವ ಉಳಿಸುವ ಸಂಜೀವಿನಿ” ಎಂದು ಸ್ವಯಂಪ್ರೇರಿತ ರಕ್ತದಾನಿಗಳನ್ನು ಅಭಿನಂದಿಸಿದರು.

       ದೇಶದಲ್ಲಿ ಪ್ರತಿನಿತ್ಯ ರಕ್ತದಕೊರತೆಯಿಂದ ಲಕ್ಷಾಂತರ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಪಘಾತ, ಹೆರಿಗೆ ಇನ್ನಿತರೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಮನುಷ್ಯ ಏನೇ ದಾನ ಮಾಡಿದರೂ ರಕ್ತದಾನಕ್ಕಿಂತ ಮತ್ತೊಂದು ಶ್ರೇಷ್ಟದಾನ ಯಾವುದೂ ಇಲ್ಲ.

        ರಕ್ತದಾನ ಮೂಲಕ ಜೀವ ಉಳಿಸುವ ಪುಣ್ಯದ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಲಿಂಗಾರೆಡ್ಡಿ ಹೇಳಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ||ಜಯಪ್ರಕಾಶ್ ಮಾತನಾಡಿ, ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ.ಹಾಗಾಗಿ ತುರ್ತು ಪರಿಸ್ಥಿಗಳಲ್ಲಿ ದಾನಿಯಿಂದ ಸ್ವೀಕರಿಸಿದ ರಕ್ತವಷ್ಟೇ ರೋಗಿಯ ಜೀವವನ್ನು ಉಳಿಸಲು ಸಾದ್ಯ. ಇಂದೇ ರಕ್ತದಾನ ಮಾಡುವುದರ ಜೊತೆಗೆ ಜೀವದಾನಿಗಳಾಗಿ ಎಂದು ಕರೆ ನೀಡಿದರು

        ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಪಾಲಾಕ್ಷ ಮಾತನಾಡಿ, ದೇಶದಲ್ಲಿ ಇಂದು ರಕ್ತದ ಕೊರತೆ ದಿನ ದಿನವೂ ಹೆಚ್ಚುತ್ತಿದೆ. ಸಾಕಷ್ಟು ರೋಗಿಗಳು ಜೀವಕಳೆದುಕೊಳ್ಳುವಂತಾಗುತ್ತಿದೆ. ಎಲ್ಲಾ ಕಡೆಯೂ ಯುವಕರು, ಸಂಘ ಸಂಸ್ಥೆಗಳು ಇಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ ಬೆಳವಣಿಗೆ ಎಂದರು

       ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿಯವರು ಮಾತನಾಡಿ ಎಲ್ಲಾ ಧಾನದಲ್ಲೆ ಶ್ರೇಷ್ಟಧಾನ ರಕ್ತಧಾನ.ಇದರ ಮಹತ್ವ ಎಲ್ಲರೂ ತಿಳಿಯಬೇಕು ಎಂದರು

       ಪ್ರಾಂಶುಪಾಲರಾದ ಎಮ್ ಎಸ್ ಪ್ರಭಾಕರ್‍ರವರು ರಕ್ತದಾನ ಮಾಡಿ ಶಾಲೆಯ ಸಿಬ್ಬಂದಿ ವರ್ಗಕ್ಕೆ ಸ್ಪೂರ್ತಿಯಾಗುವುದರ ಜೊತೆಗೆ, ಕಾರ್ಯಕ್ರಮ ಕುರಿತು ಮಾತನಾಡಿ ರಕ್ತ ವರ್ಗವಣಾ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕಾರ್ಲ್ ಲ್ಯಾಂಡ್ ಸ್ಟೀನರ್ ಅವರ ಜನ್ಮದಿನದ ನೆನಪಿಗಾ ರಕ್ತದಾನ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು

       ಈ ದೇಶದಲ್ಲಿ ಅದೇಷ್ಟೋ ಜನಕ್ಕೆ ರಕ್ತದ ಅವಶ್ಯಕತೆ ಇದೆ, ಅಪಘಾತ, ಅವಘಡ ಸಂಭವಿಸಿದವರು, ವಿವಿದ ಕಾಯಿಲೆಯಿಂದ ಬಳಲುತ್ತಿರುವ ಮಂದಿಯು ಒಂದು ಯುನಿಟ್ ರಕ್ತಕ್ಕಾಗಿ ಒದ್ದಾಡುತ್ತಿದ್ದಾರೆ. ಇಂತವರಿಗಾಗಿ ರಕ್ತದಾನ ಮಾಡಬೇಕಾಗಿದೆ. ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯುನಿಟ್ ರಕ್ತವು ಜೀವಗಳನ್ನು ಉಳಿಸಬಲ್ಲದು, “ರಕ್ತದಾನ ಮಾಡಿ ಜೀವನವೆಂಬ ಉಡುಗೊರೆಯನ್ನು ಕೊಡಿ” ಎಂದರು

        ಸಾರ್ವಜನಿಕರು, ಶಿಕ್ಷಕರು ಮತ್ತು ಪೋಷಕರು ಒಳಗೊಂಡಂತೆ ಸುಮಾರು 60ಕ್ಕೂ ಧಾನಿಗಳು ರಕ್ತಧಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೆಇಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಗಣೇಶ್ ಹಾಗೂ ಶಾಲೆಯ ಬೋಧಕ ವರ್ಗದವರಾದ ಸುನಿಲ್ ಭಟ್ ರಾಹುಲ್ ನಾಗರಾಜ್, ರಾಬಿನ್ ರಾಕೇಶ್ ಕಿರಣ್ ಬಾಬು ಜಗದೀಶ್, ಹಾಗೂ ಬೋಧಕೇತರ ವರ್ಗ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link