ಹರಪನಹಳ್ಳಿ:
ಸ್ಥಳೀಯ ಎನ್.ಎಸ್.ಎಸ್.ಘಟಕ, ಎಸ್.ಸಿ.ಎಸ್.ಔಷಧಿ ಮಹಾವಿದ್ಯಾಲಯ ಹಾಗೂ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ, ಸಂಶೋದನಾ ಕೇಂದ್ರ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ತೆಗ್ಗಿನಮಠದ ಷ.ಬ್ರ.ಶ್ರೀ ವರಸದ್ಯೋಜಾತ ಶಿವಚಾರ್ಯ ಸ್ವಾಮಿಜಿಯವರ 26ನೇ ಜನ್ಮದಿನೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ನಮ್ಮ ಶ್ರೀಮಠದಲ್ಲಿ ನಾವು ಸಂಕಲ್ಪ ಮಾಡಿದಂತೆ ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣ ಶಿಬಿರ ಮಾಡಲಾಗಿದೆ. ಜನ್ಮ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರವನ್ನು ನಡೆಸಲಾಗಿದ್ದು ಸಂಸ್ಥೆಯ ಎಲ್ಲಾ ಸಿಬ್ಬಂಧಿವರ್ಗದವರು ಹಾಗೂ ವಿದ್ಯಾರ್ಥಿಗಳು. ತೆಗ್ಗಿನಮಠ ಎತ್ತರಕ್ಕೆ ಬೆಳೆಯಲು ಓ.ಎಂ.ಎ.ಇ.ಸಂಸ್ಥೆಯಲ್ಲಿ ಸಾವಿರಾರು ಉದ್ಯೋಗಸ್ಥರು, ಲಕ್ಷಾಂತರ ಅಕ್ಷರವಂತರಾಗಿದ್ದಾರೆ ಎಂದರೆ ಲಿಂ.ಚಂದ್ರಮೌಳೇಶ್ವರ ಶ್ರೀಗಳು ಕಾರಣರಾಗಿದ್ದಾರೆ.
ಕೇವಲ ಅಕ್ಷರ ದಾಸೋಹ ಅಷ್ಟೆ ಅಲ್ಲ, ಮಠ ಅನೇಕ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅಕ್ಷರದಾಸೋಹ, ಜ್ಞಾನ ದಾಸೋಹ, ಆರೋಗ್ಯ ದಾಸೋಹವನ್ನು ಮಾಡುವ ಮೂಲಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಮಠ ಕಾರಣವಾಗಿದೆ ಎಂದರು.
ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಮಾತನಾಡಿ ವರಸದ್ಯೋಜಾತ ಶ್ರೀಗಳ ಹುಟ್ಟುಹಬ್ಬದ ನಿಮಿತ್ತ ಗೌರವವನ್ನು ಸಲ್ಲಿಸುವ ಕೆಲಸ ಮಾಡಲಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಸಾಮಾಜಿಕ ಸೇವೆಗಳಿಗೆ, ಸಾಮಾಜಿಕ ಕಳಕಳಿಯ ಜವಾಬ್ದಾರಿ ಹೆಚ್ಚಿಸುತ್ತಿದ್ದು ನಾಡಿನ ಜನಪರ ಕಾಳಜಿಯಿಂದ ಕೆಲಸ ನಿರ್ವಹಿಸುತ್ತಿದ್ದು ಪೂಜ್ಯರು ಸಹ ತಮ್ಮದೇಯಾದ ಸೇವೆಯನ್ನು ಮಾಡುತ್ತಾ ಹೆಸರನ್ನು ಮಾಡಲಿ ಎಂದು ಹೇಳಿದರು.
ಪ್ರೋ.ಎಂ.ತಿಮ್ಮಪ್ಪ ಮಾತನಾಡಿ ಶ್ರೀಗಳ 26ನೇ ವರ್ಷದ ಹುಟ್ಟುಹಬ್ಬದ ಸಂದರ್ಭಧಲ್ಲಿ ಸಂಸ್ಥೆಗಳಿಂದ ಗೌರವ ಸಲ್ಲಿಸುತ್ತಿದ್ದು ಸಂಸ್ಥೆ ಇನ್ನು ಎತ್ತರವಾಗಿ ಬೆಳೆಯಲಿ, ಪರಮ ಪೂಜ್ಯರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವುಗಳು ಸಾಕಾರಗೊಳ್ಳಲಿ ಎಂದು ಶುಭಾಶಯ ತಿಳಿಸಿದರು.
ಈ ಸಂದರ್ಭಧಲ್ಲಿ ಉಪನ್ಯಾಸಕರಾದ ರಾಜಶೇಖರ, ಎಂ.ಗಂಗಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಂ.ಕೊಟ್ರಯ್ಯ, ಎಸ್.ಸಿ.ಎಸ್.ಔಷಧಿ ಮಹಾವಿದ್ಯಾಲಯದ ಪ್ರಾಚಾರ್ಯ ನಾಗೇಂದ್ರರಾವ್, ಬಂಗಿ ಬಸಪ್ಪ ಪಿಯು ಕಾಲೇಜು ಪ್ರಾಂಶುಪಾಲ ಎ.ವಿ.ಅರುಣಕುಮಾರ, ಷಣ್ಮುಖಪ್ಪ, ವಾಗೀಶ್, ಕರಿಯಪ್ಪ, ಸೇರಿದಂತೆ ಮತ್ತಿತರರು ಇದ್ದರು.