ಬೆಂಗಳೂರು
ಪಾದರಾಯನಪುರದ ಗಲಭೆ ಕೋರ ಆರೋಪಿಗಳನ್ನು ಇರಿಸಿದ್ದ ರಾಮನಗರ ಜಿಲ್ಲಾ ಕಾರಾಗೃಹವನ್ನು ನಿಯಂತ್ರಣ ವಲಯ( ಕಂಟೈನ್ಮೆಂಟ್ ಝೋನ್) ಆಗಿ ಘೋಷಿಸಲಾಗಿದೆ.ಕೊರೊನಾ ಸೋಂಕು ಹರಡದಂತೆ ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾರಾಗೃಹವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ರಾಮನಗರ ಸಿಎಂಸಿ ಆಯುಕ್ತರಾದ ಶುಭಾ ಅವರನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತುಘಟನಾ ಕಮಾಂಡರ್ ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮುಂಜಾಗೃತಾ ಕ್ರಮವಾಗಿ ರಾಮನಗರ ನಗರ ಸಭೆಯ ಏಳು ಮಂದಿ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಆರೋಪಿಗಳನ್ನು ವಾಹನದಲ್ಲಿ ಕರೆತಂದ ಹಲವು ಪೊಲೀಸರನ್ನು ಕೂಡ ಕ್ವಾರಂಟೈನ್‍ಗೆ ಒಳಪಡಿಸ ಲಾಗಿದೆ.ಪಾದರಾಯನಪುರ ಘಟನೆಯ ಆರೋಪಿಗಳ ಪೈಕಿ ಐದು ಮಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ . ಆರೋಪಿಗಳನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರ ಮಾಡದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಒತ್ತಾಯಿಸಿದ್ದರು. ಕೊನೆಗೆ ಸರ್ಕಾರ ಆರೋಪಿಗಳನ್ನು ಕಾರಾಗೃಹದಿಂದ ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರ ಮಾಡಿತ್ತು.
100 ಮಂದಿಗೆ ಕ್ವಾರಂಟೈನ್
ಈ ನಡುವೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧಿಸಿಡಲಾಗಿದ್ದ ಗಲಭೆ ಆರೋಪಿಗಳ ಪೈಕಿ ಐವರಲ್ಲಿ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ 100 ಕ್ಕೂ ಹೆಚ್ಚು ಪೊಲೀಸ್ ಪೇದೆಗಳು ಹಾಗೂ ನಗರಸಭೆ ಸಿಬ್ಬಂದಿಗಳನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಮುಂಜಾಗ್ರತಾ ಕ್ರಮವಾಗಿ ರಾಮನಗರ ಜಿಲ್ಲಾ ಕಾರಗೃಹದ 100 ಕ್ಕೂ ಹೆಚ್ಚು ಪೊಲೀಸರನ್ನು ಕ್ವಾರಂಟೈನ್ ಗೆ ಜಿಲ್ಲಾಡಳಿತ ಒಳಪಡಿಸಿದೆ ಈ ಸಂಬಂಧ ಜಿಲ್ಲಾಡಳಿತವು ಈಗಾಗಲೇ ವಿಡಿಯೋ ಪರಿಶೀಲನೆ ನಡೆಸುತ್ತಿದ್ದು, 35 ಪೊಲೀಸ್ ಪೇದೆಗಳು ಹಾಗೂ ಜೈಲಿನಲ್ಲಿ ಪಾದರಾಯನಪುರ ಆರೋಪಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದ್ದ ನಗರಸಭೆಯ 7 ಜನ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ.ಇನ್ನು 100 ಕ್ಕೂ ಅಧಿಕ ಜನ ಕ್ವಾರಂಟೈನ್ ಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ