ಹುಳಿಯಾರು
ಪಟ್ಟಣದ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ಕೋಸಂಬರಿ, ಬೇಲದ ಹಣ್ಣಿನ ಪಾನಕ ಸಂತರ್ಪಣೆ ಮಾಡುತ್ತ ಶ್ರೀರಾಮಚಂದ್ರ ಜನ್ಮ ದಿನವಾದ ರಾಮನವಮಿ ಹಬ್ಬವನ್ನು ಶನಿವಾರ ಅದ್ಧೂರಿಯಾಗಿ ಆಚರಿಸಲಾಯಿತು.
ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನದಂದು ಬೆಳಗಿನಿಂದಲೇ ಮನೆಗಳಲ್ಲಿ, ಗುಡಿಗೋಪುರಗಳಲ್ಲಿ ಶ್ರೀರಾಮನಿಗೆ ಮತ್ತು ಆಂಜನೇಯನಿಗೆ ವಿಶೇಷ ಅರ್ಚನೆ, ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು. ಪ್ರತಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಬೇಸಿಗೆಯ ಧಗೆಯನ್ನು ತಣ್ಣಗಾಗಿಸಲು ಪಾನಕ, ಕೋಸಂಬರಿ, ಮಜ್ಜಿಗೆ ಸಂತರ್ಪಣೆ ನಡಯಿತು.
ಬ್ರಾಹ್ಮಣ ಸಂಘದಿಂದ ಸೀತರಾಮಕಲ್ಯಾಣ ಮಂಟಪದಲ್ಲಿ ರಾಮ ಅಷ್ಟೋತ್ತರ, ರಾಮ ರಕ್ಷಾ ಸ್ತೋತ್ರ, ರಾಮ ಅಷ್ಟಕ, ರಾಮ ಸಹಸ್ರನಾಮ ಜಪಿಸಿತಲ್ಲದೆ ವಿಪ್ರ ಮಹಿಳಾ ಸಂಘದಿಂದ ರಾಮಕೀರ್ತನೆಯ ಭಜನೆ ಮಾಡಲಾಯಿತು. ಶ್ರೀರಂಗನಾಥಸ್ವಾಮಿ ದೇವಸ್ಥಾನ, ಶ್ರೀ ವಾಸವಿ ದೇವಸ್ಥಾನಗಳಲ್ಲೂ ಪಾನಕ, ಫನಿವಾರ ವಿತರಿಸಲಾಯಿತು.
ಶಂಕರಾಪುರ ಬಡಾವಣೆಯಲ್ಲಿ ರಾಮ ಭಜನೆ ನಡೆಸಿ ಪಾನಕ, ಫನಿವಾರ ವಿತರಿಸಲಾಯಿತು. ಆಂಜನೇಯ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಹಾಗೂ ಆಗಮಿಸಿದ್ದ ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮ ಮತ್ತು ಲಿಂಗಪ್ಪನಪಾಳ್ಯದಿಂದ ಆಗಮಿಸಿದ್ದ ಶ್ರೀರಾಮ ಮೂರ್ತಿಗೆ ಪೂಜೆ ಸಲ್ಲಿಸಿ ಬಂದಿದ್ದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು.
ಭಕ್ತಾಧಿಗಳು ಬೇಸಿಗೆಯ ಧಗೆಯನ್ನು ಲೆಕ್ಕಿಸದೆ ಆಗಮಿಸಿ ಪೂಜೆ ಜಪಗಳ ಕಾರ್ಯಗಳಲ್ಲಿ ಬಾಗವಹಿಸಿದ್ದರು. ಶ್ರೀರಾಮ ಯುವಕ ಸಂಘದ ಯುವಕರು ಪೆಂಡಾಲನ್ನು ಹಾಕಿ ಮಜ್ಜಿಗೆ ಕೋಸಂಬರಿಯನ್ನು ವಿತರಿಸಿದರು. ಎಲ್ಲರು ಈ ಸಂಭ್ರಮದಲ್ಲಿ ಭಾಗಿಯಾಗಿರುವುದು ಆಚರಣೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/13HULIYAR2.gif)