ರಂಜಾನ್ ಸಾಬ್ ಅವರ ಪುತ್ಥಳಿ ನಿರ್ಮಾಣ

ಬಳ್ಳಾರಿ:

     ಕರ್ನಾಟಕ ಏಕೀಕರಣ ಹೋರಾಟದಲ್ಲಿ 01.10.1953 ರಂದು ಹುತಾತ್ಮರಾದ ರಂಜಾನ್ ಸಾಬ್ ಅವರ ನೆನಪಿಗಾಗಿ ನಗರದಲ್ಲಿ ಪುತ್ಥಳಿ ನಿರ್ಮಾಣ ಮಾಡಬೇಕು. ಈ ಕುರಿತು ಕನ್ನಡ ರಾಜ್ಯೋತ್ಸವದ ನಿಮಿತ್ತ ಪ್ರತಿ ಬಾರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಸಾಕಷ್ಟು ಬಾರಿ ಗಮನಸೆಳೆದರೂ ಇಲ್ಲಿವರೆಗೂ ಕ್ರ್ರಮವಿಲ್ಲ. ಈ ಹಿಂದೆ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ನಮ್ಮ ಬೇಡಿಕೆಗೆ ಸ್ಪಂಧಿಸಿ, ನಗರದಲ್ಲಿ ಕೂಡಲೇ ರಂಜಾನ್ ಸಾಬ್ ಅವರ ನೆನಪಿಗಾಗಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೇ, ಇಲ್ಲಿವರೆಗೆ ನೀಡಿದ ಭರವಸೆ ಈಡೇರದಿರುವುದು ಇಲ್ಲಿನ ಜನರಿಗೆ ನೋವನ್ನುಂಟು ಮಾಡಿದೆ.

      ಕರ್ನಾಟಕ ಏಕೀಕರಣಕ್ಕೆ ಮೈಸೂರು ಪ್ರಾಂತ್ಯದ ಕೆಲ ಕಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಏಕೀಕರಣ ಹೋರಾಟ ತೀವ್ರಗೊಂಡಿತು. ಈ ವೇಳೆ ಸಹಸ್ರಾರು ಹೋರಾಟಗಾರರ ತ್ಯಾಗ, ಬಲಿದಾನಗಳು ಹುಸಿಹೋಗಲಿಲ್ಲ. ಬಳ್ಳಾರಿ-ಮೈಸೂರು ವಿಲೀನದ ಸಂಭ್ರಮಾಚರಣೆಗಾಗಿ ನಿರ್ಮಿಸಿದ ಸಭಾ ಮಂಟಪವನ್ನು ಸುಟ್ಟು ಹಾಕಲು ಏಕೀಕರಣದ ವಿರೋಧಿಗಳು ಪ್ರಯತ್ನಿಸಲಿದ್ದಾರೆ ಎನ್ನುವ ವದಂತಿ ಹರಡಿತು.

      ಸಭಾ ಮಂಟಪದ ರಕ್ಷಣೆಯ ಹೊಣೆ ಹೊತ್ತು, ಅಲ್ಲಿಯೇ ಮಲಗಿದ್ದ ಬಳ್ಳಾರಿ ನಗರದ ರಂಜಾನ್ ಸಾಬ್ ಅವರ ಮೇಲೆ ದುಷ್ಕರ್ಮಿಗಳು ಆಸಿಡ್ ಬಾಂಬ್ ಎಸೆದ ಹಿನ್ನೆಲೆಯಲ್ಲಿ ಅವರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಅವರ ನೆನಪಿಗಾಗಿ ಬಳ್ಳಾರಿ ನಗರದ ಪ್ರಮುಖ ವೃತ್ತದಲ್ಲಿ ಶೀಘ್ರದಲ್ಲೇ ಪುತ್ಥಳಿ ನಿರ್ಮಿಸಬೇಕು. ನಿರ್ಲಕ್ಷ್ಯವಹಿಸಿದರೇ ಬರುವ ದಿನಗಳಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆ ಆಶ್ರಯದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ. ಈ ಕುರಿತು ತಾವುಗಳು ಆಸಕ್ತಿ ವಹಿಸಿ ಶೀಘ್ರದಲ್ಲೇ ರಂಜಾನ್ ಸಾಬ್ ಅವರ ಪ್ಮತ್ಥಳಿ ನಿರ್ಮಾಣ ಮಾಡಲು ಅಗತ್ಯ ಕ್ರಮಕ್ಕೆ ಆಗ್ರಹ.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link