ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳಿಗೆ ರಂಗ ತರಭೇತಿ

ಗುಬ್ಬಿ

      ಕಳೆದ ಏಪ್ರಿಲ್ 11 ರಿಂದ ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಡಾ:ಗುಬ್ಬಿ ವೀರಣ್ಣ ಟ್ರಸ್ಟ್‍ವತಿಯಿಂದ ನಡೆಯುತ್ತಿರುವ ಬೇಸಿಗೆ ರಂಗ ತರಭೇತಿ ಶಿಭಿರದ ಮುಕ್ತಾಯ ಸಮಾರಂಭವು ಮೆ 11 ರಂದು ನಡೆಯುತ್ತಿದ್ದು ಕಳೆದೊಂದು ತಿಂಗಳಿಂದ ತರಭೇತಿ ಪಡೆದ ಮಕ್ಕಳು ತಾವು ಕಲಿತ ವಿವಿಧ ಕಲಾ ಪ್ರಾಕಾರಗಳನ್ನು ವೇದಿಕೆಯ ಮೇಲೆ ಅನಾವರಣಗೊಳಿಸಲಿದ್ದಾರೆ.

    ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳಿಗೆ ವಿವಿಧ ನಾಟಕಗಳ ರಂಗ ತರಭೇತಿ ಸೇರಿದಂತೆ ಮುಖವಾಡ ತಯಾರಿಕೆ, ಮಣ್ಣಿನ ಕಲಾಕೃತಿಗಳ ರಚನೆ, ಗ್ರಾಮೀಣ ಕಲೆಗಳಾದ ನೃತ್ಯ, ಕೋಲಾಟ, ಡೊಳ್ಳು ಕುಣಿತ, ಕಂಸಾಳೆ. ಸೋಲಿಗರ ನೃತ್ಯ ಸೇರಿದಂತೆ ಹಲವು ಗ್ರಾಮೀಣ ಮತ್ತು ಜಾನಪದ ಪ್ರಾಕಾರಗಳ ಬಗ್ಗೆ ಸಮಗ್ರವಾದ ತರಭೇತಿಯನ್ನು ನುರಿತ ರಂಗ ತಜ್ಞರಿಂದ ನೀಡಲಾಗಿದೆ. ಶಿಭಿರಾರ್ಥಿಗಳು ತುಂಬಾ ಉತ್ಸುಕತೆಯಿಂದ ಎಲ್ಲಾ ರೀತಿಯ ಕಲೆಗಳನ್ನು ಕಲಿಯುವಲ್ಲಿ ನಿರತರಾಗಿದ್ದು ಅಂತಿಮ ಹಂತದ ತರಭೇತಿಯಲ್ಲಿ ಮಗ್ನರಾಗಿದ್ದಾರೆ.

       ಮೆ 11 ರಂದು ನಡೆಯಲಿರುವ ರಂಗ ತರಭೇತಿ ಶಿಭಿರದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡಮಿ ಮಾಜಿ ಅಧ್ಯಕ್ಷ ಶಂಕರ್ ಹಲಗತ್ತಿ ಸಮಾರೋಪ ನುಡಿ ನುಡಿಯಲಿದ್ದಾರೆ. ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ಅಧ್ಯಕ್ಷೆ ಡಾ:ಬಿ.ಜಯಶ್ರೀ ಅಧ್ಯಕ್ಷತೆ ವಹಿಸಲಿದ್ದು. ಮುಖ್ಯ ಅಥಿತಿಗಳಾಗಿ ಉಪವಿಭಾಗಾಧಿಕಾರಿ ಸಿ.ಎಲ್.ಶಿವಕುಮಾರ್, ತಹಸಿಲ್ದಾರ್ ಮಮತಾ, ಉದ್ಯಮಿ ಜಿ.ಎಸ್.ಬಸವರಾಜು, ರಂಗ ತರಭೇತಿ ಶಿಭಿರದ ಸಂಚಾಲಕ ಡಾ:ರಾಜೇಶ್ ಗುಬ್ಬಿ ಸೇರಿದಂತೆ ಟ್ರಸ್ಟ್‍ನ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

    ಮಕ್ಕಳು ರಜೆ ಬಂತೆಂದರೆ ನೆಂಟರಿಷ್ಟರ ಮನೆಗಳಲ್ಲಿ ಮತ್ತು ಟಿವಿಗಳನ್ನು ವೀಕ್ಷಿಸುವ ಮೂಲಕ ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದರು ಆದರೆ ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ ಈ ರಂಗ ತರಭೇತಿ ಶಿಭಿರ ಮಕ್ಕಳಿಗೆ ಹೊಸ ಆಯಾಮ ನೀಡುವುದರ ಜೊತೆಗೆ ಮರೆಯಾಗುತ್ತಿರುವ ರಂಗ ನಾಟಕಗಳು ಮತ್ತು ರಂಗ ಕಲೆಗಳಿಗೆ ಹೊಸ ಚೈತನ್ಯ ನೀಡಿದಂತಾಗಿದೆ ಈ ಶಿಭಿರದಿಂದ ಮಕ್ಕಳಲ್ಲಿ ಅಢಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಉತ್ತಮ ವೇದಿಕೆಯಾಗುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೂ ಉತ್ತಮ ಸಹಕಾರಿಯಾಗುತ್ತದೆ ಇಂತಹ ಮಹತ್ವದ ಚಿಂತನೆ ನಡೆಸಿದ ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಬೇಸಿಗೆ ಅವಧಿಯಲ್ಲಿ ರಂಗ ತರಭೇತಿ ಶಿಭಿರಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಪರಸ್ಪರ ಸಹಕಾರ ಮನೋಭಾವ, ಸ್ಪರ್ಧಾಮನೋಭಾವ, ಸ್ನೇಹ, ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಢಿಸುವಂತಹ ಮಹತ್ವದ ಕಾರ್ಯಮಾಡುತ್ತಿದೆ.

       ಇತ್ತೀಚಿನ ದಿನಗಳಲ್ಲಿ ಆದುನೀಕತೆ ಬೆಳೆದಂತೆ ನರೆಯಾಗುತ್ತಿರುವ ನಮ್ಮ ಗ್ರಾಮೀಣ ರಂಗ ಕಲೆಗಳಾದ ಮಣ್ಣಿನ ಉತ್ಪನ್ನಗಳ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ಆಧುನೀಕತೆಯಿಂದ ಮರೆಯಾಗುತ್ತಿರುವ ನೃತ್ಯ, ಕೋಲಾಟ, ಡೊಳ್ಳು ಕುಣಿತ, ಮುಖವಾಡಗಳ ತಯಾರಿಕೆ ಸೇರಿದಂತೆ ಹಲವು ಜಾನಪದ ಪ್ರಾಕಾರಗಳ ಕಲಾಕೃತಿಗಳ ರಚನೆಗಳ ಬಗ್ಗೆ ತಜ್ಞರಿಂದ ವಿಶೇಷ ತರಭೇತಿ ನೀಡಲಾಗುತ್ತಿದೆ ಶಿಭಿರದಲ್ಲಿ ಭಾಗವಹಿಸಿರುವ ಮಕ್ಕಳು ತುಂಬಾ ಉತ್ಸಾಹದಿಂದ ಕಲಿಯುತ್ತಿದ್ದಾರೆ.

      ಇಂತಹ ಶಿಭಿರಗಳು ಮಕ್ಕಳಲ್ಲಿ ಹೊಸ ಉತ್ಸಾಹ ತುಂಬುವುದರ ಜೊತೆಗೆ ತಮ್ಮ ಬದುಕಿಗೆ ಹೊಸ ಆಶಾಕಿರಣವಾಗಲಿದೆ. ಬೇಸಿಗೆ ರಜೆ ಬಂತೆಂದರೆ ಅನಗತ್ಯವಾಗಿ ಕಾಲಹರಣ ಮಾಡುತ್ತಿರುವ ಮಕ್ಕಳಿಗೆ ಕಾಲದ ಮಹತ್ವ ಕಲಿತುಕೊಳ್ಳಲು ಸಹಕಾರಿಯಾಗುತ್ತಿದೆ. ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ರಂಗ ದಿಗ್ಗಜ ಡಾ.ಗುಬ್ಬಿ ವೀರಣ್ಣನವರ ರಂಗಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ದೃಷ್ಠಿಯಿಂದ ಟ್ರಸ್ಟ್ ವತಿಯಿಂದ ಇದುವರೆಗೆ ಪಟ್ಟಣದ ರಂಗಮಂದಿರದಲ್ಲಿ ಹವ್ಯಾಸಿ ನಾಟಕೋತ್ಸವ, ಪೌರಾಣಿಕ ನಾಟಕೋತ್ಯವ, ಮಕ್ಕಳ ನಾಟಕೋತ್ಸವ ಹಾಗೂ ಜಾನಪದ ನಾಟಕೋತ್ಸವಗಳ ಜೊತೆಗೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ನಾಟಕೋತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗ ನಾಟಕಗಳನ್ನು ನಡೆಸಲು ಟ್ರಸ್ಟ್ ಚಿಂತನೆ ನಡೆಸಿದೆ.

      ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನ ಮಕ್ಕಳ ಬೇಸಿಗೆ ರಂಗ ತರಭೇತಿ ಶಿಭಿರವು ಒಂದು ತಿಂಗಳುಗಳ ಕಾಲ ವಿಶೇಷ ರಂಗ ತರಭೇತಿಯನ್ನು ಟ್ರಸ್ಟ್ ವತಿಯಿಂದ ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆಸಲಾಗುತ್ತಿದೆ ತರಭೇತಿ ಶಿಭಿರದಲ್ಲಿ ನಾಟಕ, ಮಲ್ಲಕಂಬ, ಜಾನಪದ ನೃತ್ಯ ಮತ್ತು ಡೊಳ್ಳುಕುಣಿತಗಳ ಕಲಾ ಪ್ರಾಕಾರಗಳ ತರಬೇತಿಯನ್ನು ನುರಿತ ತಜ್ಞ ಕಲಾವಿದರಿಂದ ನೀಡಲಾಗುತ್ತದೆ. ಪ್ರಸ್ತುತ ರಂಗ ತರಭೇತಿ ಶಿಭಿರದಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಶಿಭಿರಾರ್ಥಿಗಳಾಗಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಪದ್ಮ ಶ್ರೀಜೋಸಲ್ಮಾರ್ ತರಭೇತಿ ನೀಡುತ್ತಿದ್ದಾರೆ. ಗ್ರಾಮೀಣ ಮಕ್ಕಳಲ್ಲಿನ ಸಂಕುಚಿತ ಮನೋಭಾವ ಹೋಗಲಾಡಿಸಲು ಮತ್ತು ಮಕ್ಕಳಲ್ಲಿ ಕ್ರೀಯಾತ್ಮಕತೆ ಬೆಳೆಸಲು ಹೆಚ್ಚಿನ ಆಧ್ಯತೆ ನೀಡಿ ಹೆಚ್ಚಿನ ತರಭೇತಿ ನೀಡಲಾಗುತ್ತಿದೆ. ಸಂಪನ್ಮೂಲವ್ಯಕ್ತಿ ದೊರೆರಾಜು ಗ್ರಾಮೀಣ ಪ್ರಕಾರಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link