ರಂಗ ತರಭೇತಿ ಶಿಭಿರ

ಗುಬ್ಬಿ
 
        ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳಿಗೆ ರಂಗ ತರಭೇತಿ ಸೇರಿದಂತೆ ಮುಖವಾಡ ತಯಾರಿಕೆ, ಮಣ್ಣಿನ ಕಲಾಕೃತಿಗಳ ರಚನೆ, ಗ್ರಾಮೀಣ ಕಲೆಗಳಾದ ನೃತ್ಯ, ಕೋಲಾಟ, ಡೊಳ್ಳು ಕುಣಿತ ಚಿಟ್ಟಿಮೇಳ ಸೇರಿದಂತೆ ಹಲವು ಗ್ರಾಮೀಣ ಮತ್ತು ಜಾನಪದ ಪ್ರಾಕಾರಗಳ ಬಗ್ಗೆ ಸಮಗ್ರವಾದ ತರಭೇತಿಯನ್ನು ನುರಿತ ರಂಗ ತಜ್ಞರಿಂದ ಕೊಡಿಸಲಾಗುತ್ತಿದ್ದು ಶಿಭಿರಾರ್ಥಿಗಳು ಉತ್ಸುಕತೆಯಿಂದ ಕಲಿಯುವಲ್ಲಿ ನಿರತರಾಗಿದ್ದಾರೆ.
        ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ ಏಪ್ರಿಲ್ 11 ರಿಂದ ಪ್ರಾರಂಭವಾಗಿರುವ ರಂಗ ತರಭೇತಿ ಶಿಭಿರ ಮೆ 11 ರವರೆಗೆ ಒಂದು ತಿಂಗಳುಗಳ ಕಾಲ ರಂಗ ಮಂದಿರದಲ್ಲಿ ನಡೆಸಲಾಗುತ್ತಿದೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಉತ್ತಮ ರೀತಿಯಲ್ಲಿ ತರಭೇತಿ ಪಡೆಯುತ್ತಿದ್ದಾರೆ.
        ಮಕ್ಕಳು ರಜೆ ಬಂತೆಂದರೆ ನೆಂಟರಿಷ್ಟರ ಮನೆಗಳಲ್ಲಿ ಮತ್ತು ಟಿವಿಗಳನ್ನು ವೀಕ್ಷಿಸುವ ಮೂಲಕ ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದರು ಆದರೆ ಈ ರಂಗ ತರಭೇತಿ ಶಿಭಿರ ಮಕ್ಕಳಿಗೆ ಹೊಸ ಆಯಾಮ ನೀಡುವುದರ ಜೊತೆಗೆ ಮರೆಯಾಗುತ್ತಿರುವ ರಂಗ ನಾಟಕಗಳು ಮತ್ತು ರಂಗ ಕಲೆಗಳಿಗೆ ಹೊಸ ಚೈತನ್ಯ ನೀಡಿದಂತಾಗಿದೆ ಈ ಶಿಭಿರದಿಂದ ಮಕ್ಕಳಲ್ಲಿ ಅಢಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಉತ್ತಮ ವೇದಿಕೆಯಾಗುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೂ ಉತ್ತಮ ಸಹಕಾರಿಯಾಗುತ್ತದೆ ಇಂತಹ ಮಹತ್ವದ ಚಿಂತನೆ ನಡೆಸಿದ ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಬೇಸಿಗೆ ಅವಧಿಯಲ್ಲಿ ರಂಗ ತರಭೇತಿ ಶಿಭಿರಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಪರಸ್ಪರ ಸಹಕಾರ ಮನೋಭಾವ, ಸ್ಪರ್ಧಾಮನೋಭಾವ, ಸ್ನೇಹ, ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಢಿಸುವಂತಹ ಮಹತ್ವದ ಕಾರ್ಯಮಾಡುತ್ತಿದೆ.
       ಇತ್ತೀಚಿನ ದಿನಗಳಲ್ಲಿ ಆದುನೀಕತೆ ಬೆಳೆದಂತೆ ನರೆಯಾಗುತ್ತಿರುವ ನಮ್ಮ ಗ್ರಾಮೀಣ ರಂಗ ಕಲೆಗಳಾದ ಮಣ್ಣಿನ ಉತ್ಪನ್ನಗಳ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ಆಧುನೀಕತೆಯಿಂದ ಮರೆಯಾಗುತ್ತಿರುವ ನೃತ್ಯ, ಕೋಲಾಟ, ಡೊಳ್ಳು ಕುಣಿತ, ಮುಖವಾಡಗಳ ತಯಾರಿಕೆ ಸೇರಿದಂತೆ ಹಲವು ಜಾನಪದ ಪ್ರಾಕಾರಗಳ ಕಲಾಕೃತಿಗಳ ರಚನೆಗಳ ಬಗ್ಗೆ ತಜ್ಞರಿಂದ ವಿಶೇಷ ತರಭೇತಿ ನೀಡಲಾಗುತ್ತಿದೆ ಶಿಭಿರದಲ್ಲಿ ಭಾಗವಹಿಸಿರುವ ಮಕ್ಕಳು ತುಂಬಾ ಉತ್ಸಾಹದಿಂದ ಕಲಿಯುತ್ತಿದ್ದಾರೆ.
        ಇಂತಹ ಶಿಭಿರಗಳು ಮಕ್ಕಳಲ್ಲಿ ಹೊಸ ಉತ್ಸಾಹ ತುಂಬುವುದರ ಜೊತೆಗೆ ತಮ್ಮ ಬದುಕಿಗೆ ಹೊಸ ಆಶಾಕಿರಣವಾಗಲಿದೆ. ಬೇಸಿಗೆ ರಜೆ ಬಂತೆಂದರೆ ಅನಗತ್ಯವಾಗಿ ಕಾಲಹರಣ ಮಾಡುತ್ತಿರುವ ಮಕ್ಕಳಿಗೆ ಕಾಲದ ಮಹತ್ವ ಕಲಿತುಕೊಳ್ಳಲು ಸಹಕಾರಿಯಾಗುತ್ತಿದೆ. ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ರಂಗ ದಿಗ್ಗಜ ಡಾ.ಗುಬ್ಬಿ ವೀರಣ್ಣನವರ ರಂಗಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ದೃಷ್ಠಿಯಿಂದ  ಟ್ರಸ್ಟ್ ವತಿಯಿಂದ ಇದುವರೆಗೆ ಪಟ್ಟಣದ ರಂಗಮಂದಿರದಲ್ಲಿ ಹವ್ಯಾಸಿ ನಾಟಕೋತ್ಯವ, ಪೌರಾಣಿಕ ನಾಟಕೋತ್ಯವ, ಮಕ್ಕಳ ನಾಟಕೋತ್ಸವ  ಹಾಗೂ ಜಾನಪದ ನಾಟಕೋತ್ಸವಗಳ ಜೊತೆಗೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ನಾಟಕೋತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗ ನಾಟಕಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಅಧ್ಯಕ್ಷೆ ಡಾ:ಬಿ.ಜಯಶ್ರೀ ತಿಳಿಸಿದರು.
        ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನ ಮಕ್ಕಳ ಬೇಸಿಗೆ ರಂಗ ತರಭೇತಿ ಶಿಭಿರವು ಒಂದು ತಿಂಗಳುಗಳ ಕಾಲ ವಿಶೇಷ ರಂಗ ತರಭೇತಿಯನ್ನು ಟ್ರಸ್ಟ್ ವತಿಯಿಂದ ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆಸಲಾಗುತ್ತಿದೆ ತರಭೇತಿ ಶಿಭಿರದಲ್ಲಿ ನಾಟಕ, ಮಲ್ಲಕಂಬ, ಜಾನಪದ ನೃತ್ಯ ಮತ್ತು ಡೊಳ್ಳುಕುಣಿತಗಳ ಕಲಾ ಪ್ರಾಕಾರಗಳ ತರಬೇತಿಯನ್ನು ನುರಿತ ತಜ್ಞ ಕಲಾವಿದರಿಂದ ನೀಡಲಾಗುತ್ತದೆ.
        ಪ್ರಸ್ತುತ ರಂಗ ತರಭೇತಿ ಶಿಭಿರದಲ್ಲಿ 80 ಕ್ಕೂ ಹೆಚ್ಚು ಮಕ್ಕಳು ಶಿಭಿರಾರ್ಥಿಗಳಾಗಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಪದ್ಮ ಶ್ರೀಜೋಸಲ್ಮಾರ್ ತರಭೇತಿ ನೀಡುತ್ತಿದ್ದಾರೆ. ಗ್ರಾಮೀಣ ಮಕ್ಕಳಲ್ಲಿನ ಸಂಕುಚಿತ ಮನೋಭಾವ ಹೋಗಲಾಡಿಸಲು ಮತ್ತು ಮಕ್ಕಳಲ್ಲಿ ಕ್ರೀಯಾತ್ಮಕತೆ ಬೆಳೆಸಲು ಹೆಚ್ಚಿನ ಆಧ್ಯತೆ ನೀಡಿ ಹೆಚ್ಚಿನ ತರಭೇತಿ ನೀಡಲಾಗುತ್ತಿದೆ. ಸಂಪನ್ಮೂಲವ್ಯಕ್ತಿ ದೊರೆರಾಜು ಗ್ರಾಮೀಣ ಪ್ರಕಾರಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ.  
       ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೂ ಬೇಸಿಗೆ ರಜೆ ಅವಧಿಯಲ್ಲಿ ವಿಶೇಷ ತರಭೇತಿ ಶಿಭಿರವನ್ನು ನಡೆಸುತ್ತಿದ್ದು ಮಕ್ಕಳಿಗೆ ಗ್ರಾಮೀಣ ಕಲೆ ಮತ್ತು ರಂಗ ತರಭೇತಿಗಳನ್ನು ನೀಡಲಾಗುತ್ತಿದೆ ಅಲ್ಲದೆ ಮಕ್ಕಳಿಗೆ ವಿಶೇಷ ರಂಗ ತರಭೇತಿ ಮತ್ತು ಮಾರ್ಗಧರ್ಶನಗಳನ್ನು ನೀಡಲಾಗುತ್ತಿದೆ ಪ್ರತಿ ವರ್ಷ ನಿರಂತರವಾಗಿ ಬೇಸಿಗೆ ರಂಗ ತರಭೇತಿ ಶಿಭಿರವನ್ನು ನಡೆಸಲು ಚಿಂತನೆ ನಡೆಸಿದ್ದು ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳು ಶಿಕ್ಷಣದ ಜೊತೆಗೆ ವಿವಿಧ ಆಯಾಮಗಳ ಬಗ್ಗೆ ಕಲಿಯುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗುತ್ತದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್.
         ತಾಲ್ಲೂಕಿನ ಹಲವು ಶಾಲೆಗಳಲ್ಲಿಯೂ ಬೇಸಿಗೆ ತರಭೇತಿ ಶಿಭಿರಗಳನ್ನು ನಡೆಸುತ್ತಿದ್ದು ಮಕ್ಕಳ ಪ್ರಗತಿಗೆ ಪೂರಕವಾದ ಮತ್ತು ಮೌಲ್ಯಧಾರಿತ ತರಭೇತಿಗಳನ್ನು ತಜ್ಞ ಸಂಪನ್ಮೂಲವ್ಯಕ್ತಿಗಳಿಂದ ಕೊಡಿಸಲಾಗುತ್ತಿದೆ. ಮಕ್ಕಳು ಶಿಭಿರಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರುವುದು ಶಿಭಿರ ನಡೆಸುವವರಿಗೆ ಮತ್ತಷ್ಟು ಉತ್ಸಾಹ ನೀಡುತ್ತಿದೆ. ಮಕ್ಕಳು ರಜೆ ಅವಧಿಯಲ್ಲಿ ಅನಗತ್ಯವಾಗಿ ಕಾಲಹರಣ ಮಾಡದೆ ಇಂತಹ ಶಿಭಿರಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಆದುನೀಕತೆಯಿಂದ ಮರೆಯಾಗುತ್ತಿರುವ ರಂಗ ಕಲೆ. ರಂಗ ನಾಟಕಗಳು ಮತ್ತು ವಿವಿಧ ಜಾನಪದ ಪ್ರಾಕಾರಗಳನ್ನು ಉಳಿಸಿ ಬೆಳೆಸುವತ್ತ ಹೆಚ್ಚು ಸಹಕಾರಿಯಾಗುತ್ತವೆ.  
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link