ಸುಪ್ರಸಿದ್ಧ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ

ಹಿರಿಯೂರು :

         ತಾಲ್ಲೂಕಿನ ವಾಣಿವಿಲಾಸ ಸಾಗರ ಹಿನ್ನೀರು ಬಳಿ ಇರುವ ಕಾಡುಗೊಲ್ಲರ ಆರಾದ್ಯ ದೈವ ಹಾಗೂ ಸುಪ್ರಸಿದ್ಧ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಕಾರ್ಯಕ್ರಮ ಶನಿವಾರದಂದು ಮಧ್ಯಾಹ್ನ ಸಡಗರ ಹಾಗೂ ಸಂಭ್ರಮಗಳಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

        ಆರಂಭದಲ್ಲಿ ಸ್ವಾಮಿಯನ್ನು ವೇದಾವತಿ ನದಿಗೆ ಕೊಂಡ್ಯೊದು ಪೂಜಿಸಿದ ನಂತರ ಲಕ್ಕಿಹಳ್ಳಿ ಮಜಿರೆ ಹಂಚಿಬಾರಿಹಟ್ಟಿ ಗ್ರಾಮದಿಂದ ಅಂಲಕರಿಸಿದ ಉತ್ಸವಮೂರ್ತಿಯನ್ನು ಅಶ್ವದ ಮೇಲೆ ಮೆರವಣಿಗೆ ತಂದು ಅಂಭಿನೋತ್ಸವ ನೆರವೇರಿಸಲಾಯಿತು.

         ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಶ್ರೀಮತಿ ಕೆ.ಪೂರ್ಣಿಮ ಶ್ರೀನಿವಾಸ್ ಹಾಗೂ ರಾಜ್ಯ ಬಿಜೆಪಿ ಮುಖಂಡರಾದ ಡಿ.ಟಿ.ಶ್ರೀನಿವಾಸ್ ಪಾಲ್ಗೊಂಡು ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮೆಳೆ-ಬೆಳೆಯಾಗಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಈ ಸಂಭರ್ದದಲ್ಲಿ ಮಾಜಿ ನಗರಸಭೆ ಅಧ್ಯಕ್ಷರಾದ ಟಿ.ಚಂದ್ರಶೇಖರ್, ನಗರಸಭೆಸದಸ್ಯರಾದ ಜಿ ಪ್ರೇಮ್ ಕುಮಾರ್, ಬಿಜೆಪಿ ಮುಖಂಡ ಪೆರಿಸ್ವಾಮಿ, ಗ್ರಾ.ಪಂ.ಅಧ್ಯಕ್ಷತೆ ಶ್ರೀಮತಿ ಅನಿತಮ್ಮ, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

        ಈ ಉತ್ಸವದ ವಿಶೇಷತೆಯಂದರೆ ಸುತ್ತಮುತ್ತಲ ಗ್ರಾಮಗಳ ಭಕ್ತರು ತಮ್ಮ ಮನೆ ಹಾಗೂ ಹೊಲಗದ್ದೆಗಳಲ್ಲಿ ಹಾವು-ಚೇಳುಗಳು ಹುಳ-ಹುಪ್ಪಟೆಗಳು ಕಾಣಿಸಿಕೊಳ್ಳದಿರಲ್ಲಿ ಎಂಬುದಾಗಿ ಹರಕೆ ಮಾಡಿಕೊಂಡಿದ್ದ ಭಕ್ತರು ಈ ಸ್ವಾಮಿಗೆ ಬೆಳ್ಳಿಯ ಹಾವು-ಚೇಳುಗಳನ್ನು ಅರ್ಪಿಸಿ ಬೆಲ್ಲ, ಬಾಳೆಹಣ್ಣಿನ ಪ್ರಸಾದ ಹಂಚುವುದು ವಾಡಿಕೆ. ಈ ಅಂಬಿನೋತ್ಸವದಲ್ಲಿ ಹಿರಿಯೂರು ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲಿ ಸೇರಿದಂತೆ ರಾಜ್ಯದ ವಿವಿದ ಭಾಗಗಳಿಂದ ಸುಮಾರು ಒಂದು ಲಕ್ಷಕೂ ಹೆಚ್ಚು ಜನ ಭಕ್ತಾದಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap