ರಂಗಸಂಭ್ರಮ-2019

ತುಮಕೂರು:

       ನಾಡಕಲೆಯ ಸೊಗಡಿನ ಜೀವಂತಿಕೆಯು ಅಂತರ್‍ಪ್ರವಹಿಸುವಿಕೆ ಇದ್ದಾಗ ಮಾತ್ರ ರಂಗಭೂಮಿಯ ಉಳಿವು ಮತ್ತು ನಿರಂತರತೆ ಸಾಧ್ಯವೆಂದು ವಾಲ್ಮೀಕಿ ಬಳದ ಆದ್ಯಕ್ಷ ಕೆ ಎಸ್ ಸತೀಶ್ ಅಭಿಪ್ರಾಯಪಟ್ಟರು ಅವರು ಕುಸುಮ ಕಲಾಸಂಘ(ನೋಂ) ಮೆಳೇಕಲ್ಲಹಳ್ಳಿ ಜೊಡಿ ಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಸುಗ್ಗಿ ರಂಗಸಂಭ್ರಮ-2019 ರ ಐದನೇ ಕಾರ್ಯಕ್ರಮವನ್ನು ಉದ್ಘಾಟನೆ. 

      ಅವರು ನಶಿಸುತ್ತಿರುವ ರಂಗ ಕಲೆಯ ಉನ್ನತೀಕಣಕ್ಕೆ ಇಂದಿನ ಯುವಜನತೆಯು ವಿಶಾಲಮನೋಭಾವವನ್ನು ಬೆಳೆಸಿ ಕೊಂಡು ತಮ್ಮ ದುಡಿಮೆ ಜೊತೆಗೆ ಇಂಥಾ ವಿಚಾರಗಳತ್ತ ಮನಸ್ಸು ಹರಿಸಿ ತೊಡಗಿಸಿಕೊಂಡಾಗ ಮಾತ್ರ ನಮ್ಮ ಭವ್ಯಪರಂಪರೆಯು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯ ಇಲ್ಲವಾದರೆ ಬರಿ ಪಠ್ಯವಾಗಿ ಉಳಿಯುವದರಲ್ಲಿ ಸಂಶಯವಿಲ್ಲ ವೆಂದರು.

       ವಿನೋದ್ ಮಾತನ್ನಾಡಿ ಕಾವ್ಯೇಶು ನಾಟಕಂ ರಮ್ಯ ಎಂಬತೆ ಯಾವುದೇ ಕೃತಿ ಸಾಹಿತ್ಯ, ಕಲೆ ಜನತೆಯ ಮುಂದೆ ಪ್ರದರ್ಶನ ಗೊಂಡಾಗ ಮಾತ್ರ ತನ್ನ ನೈಜತೆಯನ್ನು ತೆರೆದಿಡುತ್ತದೆ ಎಂದರು, ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಶಿವಣ್ಣ ಮಾತನ್ನಾಡುತ್ತಾ ಇಂಥಾ ಕಾರ್ಯಕ್ರಮಗಳಿಗೆ ನಾಡಿನ ಜನತೆಯ ಸಹಕಾರ ಪ್ರೋತ್ಸಾಹ ಸೇವೆಗಳ ಅಗತ್ಯತೆ ಬಹಳ ಅವಶ್ಯವಾಗಿದ್ದು

       ಆ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈ ಜೋಡಿಸುವಂತೆ ತಿಳಿಸಿದರು ಕಾರ್ಯಕ್ರಮದಲ್ಲಿ ಗ್ರಾಮದ ವೀರಣ್ಣ, ಮಲ್ಲೇಶಣ್ಣ ಹಾಗೂ ರಂಗ ಕರ್ಮಿಗಳಾದ ರಮೇಶ್ ಮೆಳೇಕಲ್ಲಹಳ್ಳಿ, ವೆಂಕಟೇಶಯ್ಯ ಉಪಸ್ಥತಿತರಿದ್ದು ದರ್ಶನ್ ನಿರೂಪಿಸಿ, ವಿನಯ್ ಸ್ವಾಗತಿಸಿ ಆದಿಮೂರ್ತಿ ವಂದಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅಮರೇಶ್ವರ ನಾಟಕ ಮಂಡಲಿ ತುಮಕೂರು ಇವರಿಂದ “ಜ್ವಾಲೆ” ನಾಟಕ ಹಾಗೂ ಕುಸುಮ ಕಲಾ ಸಂಘ ಮೆಳೇಕಲ್ಲಹಳ್ಳಿ ಇವರಿಂದ “ ಪ್ರಜಾನೀತಿ” ನಾಟಕಗಳು ನರೆದಿದ್ದ ಜನರಲ್ಲಿ ನಗೆಯಬುಗ್ಗೆಯನ್ನು ಸೃಷ್ಠಿಸಿ ಮನಸ್ಸಿನ ದುಗಡಗಳನ್ನು ಕಳೆಯುವಲ್ಲಿ ಸಹಕಾರಿಯಾದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link