ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪಾಪಿ ಬಂಧನ..!!

ಶಿಗ್ಗಾವಿ

       ತಾಲೂಕಿನ ಖುರ್ಷಾಪೂರ ಗ್ರಾಮದಲ್ಲಿ 7 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೋರ್ವ ಬಲತ್ಕಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಜರುಗಿದೆ.ಬಲತ್ಕಾರ ಮಾಡಿ ಬಾಲಕಿಯನ್ನು ಕೊಲೆ ಮಾಡಿರುವ ವ್ಯಕ್ತಿಯನ್ನು ಹುಬ್ಬಳ್ಳಿ ತಾಲೂಕಿನ ಕುರ್ಡಿಕೇರಿ ಗ್ರಾಮದ ಶೇಟ್ಟಪ್ಪ ಬಸಪ್ಪ ವಡ್ಡರ (21) ಎಂದು ಗುರುತಿಸಲಾಗಿದೆ.

        ಬಲತ್ಕಾರಕ್ಕೆ ಒಳಗಾದ ಬಾಲಕಿ ಹಾಗೂ ಅವಳ ತಾಯಿ ಸೋಮವಾರ ಖುರ್ಷಾಪೂರ ಗ್ರಾಮದಲ್ಲಿ ಸಂಭಂದಿಕರ ಮನೆಗೆ ಮದುವೆಗೆ ಬಂದಾಗ ಬೀಗರು ಉಳಿದುಕೊಳ್ಳಲು ಕೊಟ್ಟಿದ್ದ ಮನೆಯಲ್ಲಿ ಮಗಳನ್ನು ಮಲಗಿಸಿ ಬೀಗರ ಮನೆಗೆ ಹೋಗಿ ವಾಪಾಸ ಬರುವಷ್ಟರಲ್ಲಿ ಅದೇ ಮನೆಯಲ್ಲಿ ಮಲಗಿದ್ದ ಆಪಾದಿತ ಶೇಟ್ಟಪ್ಪ ವಡ್ಡರ ಅಪ್ರಾಪ್ತ ವಯಸ್ಸಿನ ಬಾಲಕಿಯಾದ ಪವಿತ್ರಾ (7) ಳನ್ನು ಎತ್ತಿಕೊಂಡು ಹೋಗಿ ಪಕ್ಕದ ಶೇಕಪ್ಪ ವಡ್ಡರರವರ ಮನೆಯ ಹಿತ್ತಲಿನ ಪಾಯಖಾನೆಯಲ್ಲಿ ಬಲತ್ಕಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಬಾಲಕಿಯ ತಾಯಿ ನಿರ್ಮಲಾ ಹನಮಂತಪ್ಪ ವಡ್ಡರ ಕೇಸು ದಾಖಲಿಸಿದ್ದಾರೆ ಬಲತ್ಕಾರ ಮಾಡಿ ಕೊಲೆ ಮಾಡಿದ ವ್ಯಕ್ತಿಯನ್ನು ಶಿಗ್ಗಾವಿ ಪೊಲೀಸರು ವಶಕ್ಕೆ ಪಡೆದು ಪೊಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

 ಪ್ರತಿಭಟನೆ :

       ಗಟನೆಯಿಂದ ಅಕ್ರೋಷಗೊಂಡ ಅನ್ಯಾಯಕ್ಕೊಳಗಾದ ಕುಟುಂಬದ ಜನರು ಹಾಗೂ ಆ ಸಮುಧಾಯದ ಜನ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಪೋಲೀಸ್ ಠಾಣೆಯೆದುರು ಜಮಾವಣೆಗೊಂಡು ಘಟನೆಯನ್ನು ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಗ್ರಹಿಸಿದರು.

        ಕಾರ್ಮಿಕ ಸಂಘಟನೆಯ ರಾಜ್ಯಾದ್ಯಕ್ಷ ಫಕ್ಕೀರೇಶ ಶಿಗ್ಗಾವಿ, ಜಯಕರ್ನಾಟಕ ಸಂಘಟನೆಯ ದುರಗಪ್ಪ ವಡ್ಡರ, ಹನುಮಂತ ಬಂಡಿವಡ್ಡರ, ಬಸವರಾಜ ಜೇಕಿನಕಟ್ಟಿ, ಗೀತಾ ಅಂಬಿಗೇರ, ಸಂತೋಷ ಕಟ್ಟಿಮನಿ, ಬಸವರಾಜ ಹಂಚಿನಮನಿ ಸೃಇದಂತೆ ಇತರ ಸಂಘಟನೆಗಳ ಪಧಾಧಿಕಾರಿಗಳು ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಅಗ್ರಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link