ಚನ್ನಗಿರಿ:
ಇಡೀ ದೇಶದಲ್ಲಿ ಮೀ ಟೂ ಎಂಬ ಟಪ್ರಾಪ್ತರ ಮೇಲಿನ ದೌರ್ಜನ್ಯ ತಡೆಯುವ ಅಭಿಯಾನ ಚಾಲ್ತಿಯಲ್ಲಿ ಇದೆ ಆದರೆ ನಮ್ಮ ರಾಜ್ಯದ ಕೆಲವರಿಗೆ ಇನ್ನೂ ಅರಿವಿಗೆ ಬಂದಂತೆ ಕಾಣುತ್ತಿಲ್ಲ ಚೆನ್ನಗಿರಿಯಲ್ಲಿ ಒಬ್ಬ ಮಹಾಶಯ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ . ಮಗುವನ್ನು ನೋಡಿಕೊಳ್ಳುವಂತೆ ಹೇಳಿ ತಾಯಿ ಕೆಲಸಕ್ಕೆ ಹೋದ ವೇಳೆ 45 ವರ್ಷದ ಆರೋಪಿ ಇಂತಹ ಕೃತ್ಯ ಎಸಗಿದ್ದಾನೆ.
ತಾಯಿ ಕೆಲಸಕ್ಕೆ ಹೋಗಿ ಮನೆಗೆ ಬಂದಾಗ ಮಗು ಅಳುತ್ತಿರುವುದನ್ನು ಗಮನಿಸಿ ತಾಯಿ ಪರೀಕ್ಷಿಸಿದಾಗ ಅತ್ಯಾಚಾರ ನಡೆದಿರುವುದು ಕಂಡುಬಂದಿದೆ. ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಚಿಕ್ಕಪ್ಪ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
