ತುಮಕೂರು : ಅಪರೂಪದ ಬ್ಲಡ್ ಗ್ರೂಪ್ ಪತ್ತೆ..!!

ತುಮಕೂರು:

      ರಕ್ತದ ಗುಂಪುಗಳಲ್ಲಿಯೇ ಅಪರೂಪವಾದ ರಕ್ತ ಗುಂಪಾಗಿರುವ ಬಾಂಬೆ ಬ್ಲಡ್ ಗ್ರೂಪ್ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಪಾವಗಡದಲ್ಲಿ ಈ ಅಪರೂಪದ ರಕ್ತದ ಗುಂಪನ್ನು ಹೊಂದಿರುವ ವ್ಯಕ್ತಿಯೊಬ್ಬರಿದ್ದಾರೆ.

    ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಈ ವ್ಯಕ್ತಿಯ ರಕ್ತವನ್ನು ಸಂಗ್ರಹಿಸಿಡಲಾಗಿದೆ. 6 ತಿಂಗಳ ಹಿಂದೆ ವ್ಯಕ್ತಿಯೊಬ್ಬರು ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದು ರಕ್ತ ತಪಾಸಣೆ ನಡೆಸಿದಾಗ ಅವರಲ್ಲಿ ಬಾಂಬೆ ಗ್ರೂಪ್​ನ ರಕ್ತ ಇರುವುದು ಪತ್ತೆಯಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಬಾಂಬೆ ಬ್ಲಡ್ ಗ್ರೂಪ್ ಹಿನ್ನೆಲೆ : 

   ಸುಮಾರು ವರ್ಷಗಳ ಹಿಂದೆ ಬಾಂಬೆಯಲ್ಲಿ ಈ ರೀತಿಯಾದ ಅಪರೂಪದ ಬ್ಲಡ್ ಗ್ರೂಪ್ ಪತ್ತೆಯಾಗಿತ್ತು ಆದ್ದರಿಂದ ಅದಕ್ಕೆ ಬಾಂಬೆ ಬ್ಲಡ್ ಗ್ರೂಪ್ ಎಂದು ಹೆಸರಿಡಲಾಗಿತ್ತು ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ ವೀಣಾ ತಿಳಿಸಿದ್ದಾರೆ. ಅಂತಹ ವ್ಯಕ್ತಿಗೆ ರಕ್ತ ಬೇಕಾದ ಸಂದರ್ಭದಲ್ಲಿ ಬಾಂಬೆ ಬ್ಲಡ್ ಗ್ರೂಪ್ ರಕ್ತವನ್ನೇ ಬಳಸಬೇಕಾಗುತ್ತದೆ. ಪಾವಗಡದಲ್ಲಿ ವ್ಯಕ್ತಿಯೊಬ್ಬರಿಂದ ದೊರೆತ ಬಾಂಬೆ ಬ್ಲಡ್ ಗ್ರೂಪ್ ರಕ್ತಕ್ಕೆ ಪಾಂಡಿಚೇರಿಯಿಂದ ಬೇಡಿಕೆ ಬಂದಿತ್ತು. ಆದರೆ, ಕಾರಣಾಂತರಗಳಿಂದ ಅವರು ಬರದೇ, ನಂತರ ಅದನ್ನು ಬೇರೊಬ್ಬ ವ್ಯಕ್ತಿಗೆ ನೀಡಲಾಗಿತ್ತು ಎಂದರು.

     ಈ ರಕ್ತದ ಗುಂಪು ಅತಿ ವಿರಳ ಮತ್ತು ಸುಮಾರು 17 ಸಾವಿರ ಜನರಲ್ಲೆ ಒಬ್ಬರಿಗೆ ಮಾತ್ರ ಈ ಬಾಂಬೆ ಬ್ಲಡ್ ಗ್ರೂಪ್ ಕಂಡುಬರುತ್ತದೆ. ಹೀಗಾಗಿ ಇದು ಅತ್ಯಅಪರೂಪದ ರಕ್ತದ ಗುಂಪು ಎಂದು ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಇಂತಹ ಗ್ರೂಪ್ ಹೊಂದಿರುವವರ ಸಂಖ್ಯೆ ಜಾಸ್ತಿ ಇದೆ. ಈ ಭಾಗದಲ್ಲಿ ಗುಳೆ ಹೋಗುವವರ ಸಂಖ್ಯೆ ಹೆಚ್ಚು ಇರುತ್ತದೆ. ಅದೇ ರೀತಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವುದರಿಂದ ಹೊರ ರಾಜ್ಯದ ಜನರ ಓಡಾಟ ಇರುತ್ತದೆ. ಹೀಗಾಗಿ ಈ ಭಾಗದಲ್ಲಿ ಬಾಂಬೆ ಬ್ಲಡ್ ಗ್ರೂಪ್ ಕಂಡು ಬಂದಿದೆ ಎನ್ನಲಾಗಿದೆ.

    ಇನ್ನು ತುಮಕೂರು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳಿಂದ ಏಪ್ರಿಲ್ 2018 ರಿಂದ ಮಾರ್ಚ್ 2019ರವರೆಗೆ 15606 ಮಂದಿ ರಕ್ತದಾನ ಮಾಡಿದ್ದಾರೆ. 122 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಶೇಕಡಾ 50 ರಷ್ಟು ಬಿ​ ಗ್ರೂಪ್ ರಕ್ತಕಣಗಳು ಪತ್ತೆಯಾಗಿರುವುದು ಇಲ್ಲಿ ಗಮನಾರ್ಹ ಅಂಶವಾಗಿದೆ. ನಂತರದ ಸ್ಥಾನದಲ್ಲಿ ಎ ಗ್ರೂಪ್ ಮತ್ತು ಓ ಗ್ರೂಪ್​ ರಕ್ತಕಣಗಳು ರಕ್ತನಿಧಿ ಕೇಂದ್ರಕ್ಕೆ ಸೇರಿವೆ. ಆದ್ರೆ ಪಾವಗಡ ಹೊರತುಪಡಿಸಿ ಜಿಲ್ಲೆಯ ಯಾವ ಭಾಗದಲ್ಲೂ ಬಾಂಬೆ ಬ್ಲಡ್ ಗ್ರೂಪ್ ಪತ್ತೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap